×
Ad

ಜಪಾನ್‌ಗೆ ಬಿದ್ದ ಬಾಂಬ್‌ಗಿಂತ 12 ಪಟ್ಟು ಹೆಚ್ಚು ವಿನಾಶಕಾರಿ ಅಸ್ತ್ರ ಉತ್ಪಾದಿಸುತ್ತಿರುವ ರಶ್ಯ: ವರದಿ

Update: 2022-12-14 23:19 IST

ನ್ಯೂಯಾರ್ಕ್, ಡಿ.14: ಜಪಾನ್‌ಗೆ ಅಪ್ಪಳಿಸಿದ್ದ ಬಾಂಬ್‌ಗಿಂತ 12 ಪಟ್ಟು ಹೆಚ್ಚು ವಿನಾಶಕಾರಿಯಾಗಿರುವ ಪರಮಾಣು ಸಿಡಿತಲೆಗಳನ್ನು ರಶ್ಯ ಉತ್ಪಾದಿಸುತ್ತದೆ ಎಂದು ‘ನ್ಯೂಸವೀಕ್’ ವರದಿ ಮಾಡಿದೆ.

ರಶ್ಯ ಸಿದ್ಧಪಡಿಸುತ್ತಿರುವ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯು ಅಮೆರಿಕ ಅಥವಾ ಯುರೋಪ್‌ನ ಯಾವುದೇ ಭಾಗ ತಲುಪುವ ಸಾಮರ್ಥ್ಯ ಹೊಂದಿದೆ ಎಂದು ರಶ್ಯದ ದಿನಪತ್ರಿಕೆ ಕೊಮ್ಸೊಮೊಲ್ಸ್‌ಕಯ ಪ್ರಾವ್ಡ ವರದಿ ಮಾಡಿದ್ದು ಕ್ಷಿಪಣಿಯನ್ನು ಅಧ್ಯಕ್ಷ ಪುಟಿನ್ ವೀಕ್ಷಿಸುತ್ತಿರುವ ಫೋಟೋವನ್ನೂ ಪ್ರಕಟಿಸಿದೆ.

1945ರ ಆಗಸ್ಟ್ 6ರಂದು ಜಪಾನ್‌ನ ಹಿರೋಷಿಮಾಕ್ಕೆ ಹಾಕಿದ್ದ ಪರಮಾಣು ಬಾಂಬ್‌ಗಿಂತ 12 ಪಟ್ಟು ಹೆಚ್ಚು ಸಾಮರ್ಥ್ಯದ ಪರಮಾಣು ಸಿಡಿತಲೆ ಇದಾಗಿದ್ದು 12,000 ಕಿ.ಮೀ ದೂರದವರೆಗಿನ ಗುರಿಯನ್ನು ತಲುಪುತ್ತದೆ. ಸುಮಾರು 500 ಟನ್‌ಗಳಷ್ಟು ಭಾರ ಹೊರುವ ಸಾಮರ್ಥ್ಯವಿದ್ದು ಅಮೆರಿಕ ಅಥವಾ ಯುರೋಪ್‌ನ ಯಾವುದೇ ಭಾಗವನ್ನು ತಲುಪಬಹುದು ಎಂದು ವರದಿ ಹೇಳಿದೆ.

Similar News