ದ್ವಿತೀಯ ಟೆಸ್ಟ್: ಬಾಂಗ್ಲಾದೇಶ ವಿರುದ್ದ ಭಾರತಕ್ಕೆ ಜಯ, ಸರಣಿ ಕ್ಲೀನ್ ಸ್ವೀಪ್

Update: 2022-12-25 05:42 GMT

ಢಾಕಾ: ಆರ್. ಅಶ್ವಿನ್(ಔಟಾಗದೆ 42 ರನ್)  ಹಾಗೂ ಶ್ರೇಯಸ್ ಅಯ್ಯರ್(ಔಟಾಗದೆ 29)  ಅವರ ಸಾಂದರ್ಭಿಕ ಆಟದ ನೆರವಿನಿಂದ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್  ಪಂದ್ಯವನ್ನು 3 ವಿಕೆಟ್ ನಿಂದ ಗೆದ್ದುಕೊಂಡಿದೆ. ಈ ಮೂಲಕ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಜಯಿಸಿ ಕ್ಲೀನ್ ಸ್ವೀಪ್ ಸಾಧಿಸಿದೆ.

ಗೆಲ್ಲಲು 145 ರನ್ ಗುರಿ ಪಡೆದಿದ್ದ ಭಾರತ 47 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಮೆಹಿದಿ ಹಸನ್ ಮಿರಾಝ್ 63 ರನ್ ನೀಡಿ 5 ವಿಕೆಟ್ ಕಬಳಿಸಿ ಗಮನ ಸೆಳೆದರು.

4ನೇ ದಿನದಾಟವಾದ ರವಿವಾರ 4 ವಿಕೆಟ್ ನಷ್ಟಕ್ಕೆ 45 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತವು ಮೆಹಿದಿ ಹಸನ್ ಹಾಗೂ ನಾಯಕ ಶಾಕಿಬ್ ಅಲ್ ಹಸನ್(2-50) ಸ್ಪಿನ್ ಮೋಡಿಗೆ ತತ್ತರಿಸಿ ಒಂದು ಹಂತದಲ್ಲಿ 74 ರನ್ ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಆಗ ಜೊತೆಯಾದ ಅಶ್ವಿನ್(ಔಟಾಗದೆ 42 ರನ್, 62 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಅಯ್ಯರ್(ಔಟಾಗದೆ 29, 46 ಎಸೆತ, 4 ಬೌಂಡರಿ)8ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 71 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

Similar News