ವಿಜಯ್ ಮರ್ಚೆಂಟ್ ಟ್ರೋಫಿ: ಮಧ್ಯಪ್ರದೇಶ ವಿರುದ್ಧ ಸಿಕ್ಕಿಂ ಕೇವಲ 6 ರನ್ ಗೆ ಆಲೌಟ್

Update: 2022-12-25 09:50 GMT

ಮುಂಬೈ: ಈಶಾನ್ಯ ತಂಡಗಳು ದೇಶಿಯ ಕ್ರಿಕೆಟ್ ನಲ್ಲಿ ಹೋರಾಡಲು ಹೆಣಗಾಡುತ್ತಿರುವುದಕ್ಕೆ ಮತ್ತೊಂದು ಉದಾಹರಣೆಯೆಂಬಂತೆ  ಸೂರತ್‌ನ ಖೋಲ್ವಾಡ್ ಜಿಮ್‌ಖಾನಾ ಮೈದಾನದಲ್ಲಿ ಇತ್ತೀಚೆಗೆ  ನಡೆದ ಬಿಸಿಸಿಐನ ಅಧಿಕೃತ ಅಂಡರ್-16 ಪಂದ್ಯಾವಳಿ ವಿಜಯ್ ಮರ್ಚೆಂಟ್ ಟ್ರೋಫಿ ಪಂದ್ಯದಲ್ಲಿ ಮಧ್ಯಪ್ರದೇಶದ ವಿರುದ್ಧ ಸಿಕ್ಕಿಂ ತಂಡ 2ನೇ ಇನಿಂಗ್ಸ್ ನಲ್ಲಿ  9.3  ಓವರ್ ಗಳಲ್ಲಿ ಕೇವಲ 6 ರನ್ ಗೆ ಆಲೌಟಾಗಿದೆ.

ಗಿರಿರಾಜ್ ಶರ್ಮಾ 5 ಓವರ್‌ಗಳಲ್ಲಿ 1 ರನ್ ನೀಡಿ 5 ವಿಕೆಟ್ ಗಳನ್ನು ಕಬಳಿಸಿದರೆ, ಅಲಿಫ್ ಹಸನ್ 4.3 ಓವರ್‌ಗಳಲ್ಲಿ 5 ರನ್ ನೀಡಿ 4 ವಿಕೆಟ್ ಕಬಳಿಸಿದರು.  ಸಿಕ್ಕಿಂನ 7  ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ  ಔಟಾದರು.  ಸಿಕ್ಸಿಂ ಇನ್ನಿಂಗ್ಸ್ ಕೇವಲ 57 ಎಸೆತಗಳಿಗೆ ಕೊನೆಗೊಂಡಿತು. ಈ ಪಂದ್ಯದಲ್ಲಿ ಮಧ್ಯಪ್ರದೇಶ ಇನಿಂಗ್ಸ್ ಹಾಗೂ  365 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.

ಮಧ್ಯಪ್ರದೇಶ 8 ವಿಕೆಟ್‌ಗೆ 414 ರನ್ ಗಳಿಸಿ ಇನಿಂಗ್ಸ್  ಡಿಕ್ಲೇರ್ ಮಾಡಿಕೊಂಡ ನಂತರ ಸಿಕ್ಕಿಂ 43 ಹಾಗೂ  6 ರನ್ ಗೆ ಆಲೌಟಾಯಿತು.

ಸಂಕ್ಷಿಪ್ತ ಸ್ಕೋರ್‌:

ಮಧ್ಯಪ್ರದೇಶ 414-8 ಡಿಕ್ಲೇರ್  (ಮನಲ್ ಚೌಹಾಣ್ 170, ಪ್ರತೀಕ್ ಶುಕ್ಲಾ 86; ಅಕ್ಷ್ಯದ್ 4-87) ಸಿಕ್ಕಿಂ 43 ರನ್ (ಆದಿತ್ಯ ಭಂಡಾರಿ 5-20, ಆಯಮ್ ಸರ್ದಾನ 3-21) & 6 (ಗಿರ್ರಾಜ್ ಶರ್ಮಾ 5-1, ಹಸನ್ 4-5)

Similar News