ಕ್ರಿಸ್ಮಸ್ ಹಿನ್ನೆಲೆ: ಪೀಲೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಧಾವಿಸಿದ ಕುಟುಂಬ

Update: 2022-12-25 17:15 GMT

  ಸಾವೊಪೌಲೊ, ಡಿ.25: ಹದಗೆಡುತ್ತಿರುವ ಕ್ಯಾನ್ಸರ್ ಜೊತೆಗೆ ಮೂತ್ರಪಿಂಡ ಹಾಗೂ ಹೃದಯದ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಬ್ರೆಝಿಲ್ ಫುಟ್ಬಾಲ್ ದಂತಕತೆ ಪೀಲೆ ಅವರೊಂದಿಗೆ ಕುಟುಂಬದ ಸದಸ್ಯರು ರವಿವಾರ ಬೆಳಗ್ಗೆ ಕ್ರಿಸ್ಮಸ್ ಆಚರಿಸಿದರು.

ಕ್ರಿಸ್ಮಸ್ ದಿನದಂದು ಪೀಲೆ ಅವರ ಕುಟುಂಬ ಸದಸ್ಯರು ಪೀಲೆ ಚಿಕಿತ್ಸೆ ಪಡೆಯುತ್ತಿರುವ ಸಾವೊಪೌಲೊ ಆಸ್ಪತ್ರೆಗೆ ತೆರಳಿದರು. ಈ ವಿಚಾರವನ್ನು ಪೀಲೆ ಅವರ ಪುತ್ರಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಪೀಲೆ ನವೆಂಬರ್ ಕೊನೆಯ ವಾರ ಆಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕರುಳಿನ ಕ್ಯಾನ್ಸರ್ ಉಲ್ಬಣಿಸಿದ್ದು, ಮೂತ್ರಪಿಂಡ ಹಾಗೂ ಹೃದಯಕ್ಕೆ ಸೋಂಕು ವ್ಯಾಪಿಸಿದೆ ಎಂದು ಇತ್ತೀಚೆಗೆ ಆಸ್ಪತ್ರೆ ಮೂಲಗಳು ತಿಳಿಸಿವೆ.

ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ತಂದೆಯ ಕೈ ಹಿಡಿದುಕೊಂಡಿರುವ ಚಿತ್ರ ಪೋಸ್ಟ್ ಮಾಡಿರುವ ಪುತ್ರ ಯಡಿನೊ, ‘‘ಅಪ್ಪ ನೀವೇ ನನ್ನ ಶಕ್ತಿ’’ ಎಂದು ಬರೆದಿದ್ದಾರೆ.

2021ರ ಸೆಪ್ಟಂಬರ್ ನಲ್ಲಿ ಪೀಲೆ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ ದೊಡ್ಡ ಕರುಳಿನ ಕ್ಯಾನ್ಸರ್ ಗೆಡ್ಡೆಯನ್ನು ತೆಗೆಯಲಾಗಿತ್ತು. ಆದರೆ ಇತ್ತೀಚೆಗೆ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ಮತ್ತೆ ಕ್ಯಾನ್ಸರ್ ಸಮಸ್ಯೆ ಕೂಡ ಮರುಕಳಿಸಿತ್ತು.
 

Similar News