ಉಕ್ರೇನ್ ಯುದ್ಧ ಟೀಕಿಸಿದ ರಶ್ಯದ ಉನ್ನತ ಅಧಿಕಾರಿ ವಜಾ

Update: 2022-12-28 18:30 GMT

ಮಾಸ್ಕೊ, ಡಿ.28: ಉಕ್ರೇನ್ ಯುದ್ಧವನ್ನು ಪ್ರಶ್ನಿಸಿದ ಮತ್ತು ಟೀಕಿಸಿದ ರಶ್ಯದ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರನ್ನು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಜಾಗೊಳಿಸಲಾಗಿದೆ ಎಂದು ‘ದಿ ಮಿರರ್’ ವರದಿ ಮಾಡಿದೆ. ಪುಟಿನ್ ಅವರ ರಹಸ್ಯ ಪ್ರಯೋಗಾಲಯದ ಮುಖ್ಯಸ್ಥ, ಕರ್ನಲ್ ಜನರಲ್ ಎಡ್ವರ್ಡ್ ಚೆರ್ನೋವೊಲ್ಟ್ಸೆವ್ರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ . ಪುಟಿನ್ ಅವರ ಕಟುಟೀಕಾಕಾರರಾಗಿದ್ದ ನವಾಲ್ನಿ ಹಾಗೂ ವ್ಲಾದಿಮಿರ್ ಕರ-ಮುರ್ಝರಿಗೆ ವಿಷಪ್ರಾಶನ ಮಾಡಿದ ಪ್ರಕರಣದಲ್ಲಿ ಈ ಪ್ರಯೋಗಾಲಯದ ಸಿಬಂದಿ ನೇರವಾಗಿ ಶಾಮೀಲಾಗಿದ್ದರು ಎಂದು ವರದಿ ಹೇಳಿದೆ.

ಉಕ್ರೇನ್ ಯುದ್ಧ ಅರಂಭಗೊಂಡಂದಿನಿಂದಲೂ ಎಡ್ವರ್ಡ್ ಚೆರ್ನೋವೊಲ್ಟ್ಸೆವ್ ಈ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಶ್ಯ ಅಧ್ಯಕ್ಷರ ಕಚೇರಿ ‘ ಎಡ್ವರ್ಡ್ ಚೆರ್ನೋವೊಲ್ಟ್ಸೆವ್ ಸರಕಾರದ ಕೆಲವು ರಹಸ್ಯ ಮಾಹಿತಿಗಳನ್ನು ಮಾಧ್ಯಮದವರಿಗೆ ಸೋರಿಕೆ ಮಾಡಿದ್ದರಿಂದ ಅವರನ್ನು ವಜಾಗೊಳಿಸಲಾಗಿದೆ’ ಎಂದು ಹೇಳಿದೆ.

Similar News