×
Ad

ಮಹಿಳಾ ಟ್ವೆಂಟಿ-20 ವಿಶ್ವಕಪ್: ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಪ್ರಕಟ

Update: 2022-12-29 12:11 IST

ಹೊಸದಿಲ್ಲಿ: ಮುಂದಿನ ತಿಂಗಳು ನಡೆಯುವ ಮಹಿಳಾ ಟ್ವೆಂಟಿ-20 ವಿಶ್ವಕಪ್ ಗೆ ಭಾರತದ ತಂಡವನ್ನು ಪ್ರಕಟಿಸಲಾಗಿದೆ. ವೇಗದ ಬೌಲರ್ ಶಿಖಾ ಪಾಂಡೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿಶ್ವಕಪ್ ಟೂರ್ನಿಯು 2023ರ ಫೆಬ್ರವರಿ 10ರಿಂದ 26ರ ತನಕ ನಡೆಯಲಿದೆ. ಟೂರ್ನಿಗೆ ಹರ್ಮನ್ ಪ್ರೀತ್ ಕೌರ್ ನೇತೃತ್ವದ 15 ಸದಸ್ಯರ ತಂಡವನ್ನು ಬುಧವಾರ ಪ್ರಕಟಿಸಲಾಯಿತು.

ಶಿಖಾ 2021ರ ಅಕ್ಟೋಬರ್ ನಲ್ಲಿ ಕೊನೆಯ ಬಾರಿ ರಾಷ್ಟ್ರೀಯ ತಂಡದ ಪರ ಆಡಿದ್ದರು. ಇದೀಗ ಅವರು ಅಚ್ಚರಿ ರೀತಿಯಲ್ಲಿ ಸ್ಥಾನ ಪಡೆದಿದ್ದಾರೆ.

ವಿಶ್ವಕಪ್ ಟೂರ್ನಿಗೆ ಭಾರತ ಮಹಿಳಾ ತಂಡ

ಹರ್ಮನ್ ಪ್ರೀತ್  ಕೌರ್(ನಾಯಕಿ), ಸ್ಮೃತಿ ಮಂಧಾನ(ಉಪ ನಾಯಕಿ), ಶೆಫಾಲಿ ವರ್ಮಾ, ಯಸ್ತಿಕಾ ಭಾಟಿಯಾ(ವಿಕೆಟ್ ಕೀಪರ್), ರಿಚಾ ಘೋಷ್(ವಿಕೆಟ್ ಕೀಪರ್), ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರ್ವಾನಿ, ಪೂಜಾ ವಸ್ತ್ರಕರ್, ರಾಜೇಶ್ವರಿ ಗಾಯಕ್ವಾಡ್್ ಹಾಗೂ ಶಿಖಾ ಪಾಂಡೆ.

ಹೆಚ್ಚುವರಿ ಆಟಗಾರ್ತಿಯರು: ಸ್ನೇಹಾ ರಾಣಾ, ಎಸ್. ಮೇಘನಾ, ಮೇಘನಾ ಸಿಂಗ್

Similar News