ಟೆಸ್ಲಾ ಷೇರುಗಳಲ್ಲಿ ತೀವ್ರ ಕುಸಿತ: 200 ಬಿಲಿಯನ್‌ ಡಾಲರ್‌ ಕಳೆದುಕೊಂಡ ಎಲಾನ್‌ ಮಸ್ಕ್

Update: 2022-12-31 15:51 GMT

ವಾಷಿಂಗ್ಟನ್:‌ ಬಿಲಿಯೇನರ್‌ ಉದ್ಯಮಿ ಎಲಾನ್‌ ಮಸ್ಕ್‌ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ತಮ್ಮ ನಿವ್ವಳ ಮೌಲ್ಯದಿಂದ 200 ಬಿಲಿಯನ್‌ ಡಾಲರ್‌ ಆಸ್ತಿ ಕಳೆದುಕೊಂಡ ಇತಿಹಾಸದ ಏಕೈಕ ವ್ಯಕ್ತಿ ಎಂಬ ಕುಖ್ಯಾತಿಗೆ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಪಾತ್ರರಾಗಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಇತ್ತೀಚಿನ ವಾರಗಳಲ್ಲಿ ಟೆಸ್ಲಾ ಷೇರುಗಳು ತೀವ್ರ ಕುಸಿತ ಕಂಡ ಹಿನ್ನೆಲೆಯಲ್ಲಿ ಅವರ ಸಂಪತ್ತು 137 ಬಿಲಿಯನ್‌ ಡಾಲರ್‌ಗೆ ಕುಸಿದಿದೆ. ನವೆಂಬರ್ 4, 2021 ರಂದು ಅವರ ಸಂಪತ್ತು $340 ಶತಕೋಟಿಗೆ ಏರಿತ್ತು. ಐಷಾರಾಮಿ ಸರಕುಗಳನ್ನು ಮಾರಾಟ ಮಾಡುವ ಎಲ್‌ವಿಎಂಎಚ್‌ನ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರು ಈ ತಿಂಗಳ ಆರಂಭದಲ್ಲಿ ಮಸ್ಕ್‌ ಅವರನ್ನು ಹಿಂದಿಕ್ಕುವವರೆಗೂ ಅವರು ಮಸ್ಕ್‌ ಅವರು ವಿಶ್ವದ ನಂ.1 ಸ್ಥಾನದಲ್ಲಿಯೇ ಇದ್ದರು.

ಟೆಸ್ಲಾ 2021 ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ $1 ಟ್ರಿಲಿಯನ್ ಮಾರುಕಟ್ಟೆ ಮೌಲ್ಯವನ್ನು ಮೀರಿತ್ತು. ಆ ಮೂಲಕ ಬಲಾಢ್ಯ ತಂತ್ರಜ್ಞಾನ ಕಂಪನಿಗಳಾದ Apple Inc., Microsoft Corp., Amazon.com Inc. ಮತ್ತು Google ಪೋಷಕ ಕಂಪೆನಿ ಆಲ್ಫಾಬೆಟ್ Inc. ಸಂಸ್ಥೆಗಳ ಸಾಲಿಗೆ ಟೆಸ್ಲಾ ಕೂಡಾ ಸೇರಿತ್ತು.   

Similar News