ಮೊದಲ ಏಕದಿನ: ಶ್ರೀಲಂಕಾ ವಿರುದ್ಧ ಭಾರತ ಜಯಭೇರಿ, ಶನಕ ಶತಕ ವ್ಯರ್ಥ

ಮೂರು ವಿಕೆಟ್ ಕಬಳಿಸಿ ಮಿಂಚಿದ ಉಮ್ರಾನ್ ಮಲಿಕ್

Update: 2023-01-10 15:57 GMT

 ಗುವಾಹಟಿ, ಜ.10: ನಾಯಕ ದಸುನ್ ಶನಕ(ಔಟಾಗದೆ 108, 88 ಎಸೆತ, 12 ಬೌಂಡರಿ, 3 ಸಿಕ್ಸರ್) ದಿಟ್ಟ ಹೋರಾಟದ ಹೊರತಾಗಿಯೂ ಶ್ರೀಲಂಕಾ ಕ್ರಿಕೆಟ್ ತಂಡ ಭಾರತ ವಿರುದ್ಧದ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 67 ರನ್‌ಗಳ ಅಂತರದಿಂದ ಸೋಲುಂಡಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಶತಕ, ಉಮ್ರಾನ್ ಮಲಿಕ್ ನೇತೃತ್ವದ ಬೌಲರ್‌ಗಳ ನೆರವಿನಿಂದ ಭಾರತವು ಲಂಕಾವನ್ನು 50 ಓವರ್‌ಗಳಲ್ಲಿ 8 ವಿಕೆಟಿಗೆ 306 ರನ್‌ಗೆ ನಿಯಂತ್ರಿಸಿತು. 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಗೆಲ್ಲಲು 374 ರನ್ ಗುರಿ ಬೆನ್ನಟ್ಟಿದ್ದ ಲಂಕಾದ ಪರ ಆರಂಭಿಕ ಬ್ಯಾಟರ್ ಪಥುಮ್ ನಿಶಾಂಕ(72 ರನ್, 80 ಎಸೆತ)ಹಾಗೂ ಧನಂಜಯ ಡಿಸಿಲ್ವ(47 ರನ್, 40 ಎಸೆತ)4ನೇ ವಿಕೆಟಿಗೆ 72 ರನ್ ಜೊತೆಯಾಟ ನಡೆಸಿದರು. ಶನಕ ಹಾಗೂ ರಜಿಥಾ 9ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 100 ರನ್ ಗಳಿಸಿ ತಂಡದ ಸೋಲಿನ ಅಂತರ ಕಡಿಮೆಗೊಳಿಸಿದರು.

ಭಾರತದ ಪರ ಯುವ ವೇಗಿ ಮಲಿಕ್(3-57)ಯಶಸ್ವಿ ಬೌಲರ್ ಎನಿಸಿಕೊಂಡರು. ಮುಹಮ್ಮದ್ ಸಿರಾಜ್(2-30) ಎರಡು ವಿಕೆಟ್ ಪಡೆದರು. ಶಮಿ(1-67), ಹಾರ್ದಿಕ್ ಪಾಂಡ್ಯ(1-33) ಹಾಗೂ ಚಹಾಲ್(1-58)ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ 7 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿತು.
 

Similar News