ಚೀನಾ ಕೋವಿಡ್ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸಿದೆ: ಡಬ್ಲ್ಯುಎಚ್‌ಓ

Update: 2023-01-12 02:12 GMT

ನ್ಯೂಯಾರ್ಕ್: ಚೀನಾದಲ್ಲಿ ಕೋವಿಡ್ ಸಾಂಕ್ರಾಮಿಕ ದೊಡ್ಡ ಪ್ರಮಾಣದಲ್ಲಿ ಸ್ಫೋಟಗೊಂಡಿರುವ ಬಗ್ಗೆ ಹೆಚ್ಚಿನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೊಸ ವೈರಸ್ ಉಪ ಪ್ರಬೇಧದ ವಿರುದ್ಧದ ಹೋರಾಟದಲ್ಲಿ ವಾಷಿಂಗ್ಟನ್‌ನ ರ್ಯಾಡಿಕಲ್ ಟ್ರಾನ್ಸ್‌ಫರೆನ್ಸಿಯ ಪ್ರಯತ್ನಗಳನ್ನು ಶ್ಲಾಘಿಸಿದೆ.

ಚೀನಾದ ಅಧಿಕೃತ ಅಂಕಿ ಅಂಶಗಳು ಪ್ರಸಕ್ತ ಹೆಚ್ಚಳವಾಗಿರುವ ಕೋವಿಡ್ ಪ್ರಕರಣಗಳ ನೈಜ ಪರಿಣಾಮವನ್ನು ತೋರಿಸುತ್ತಿಲ್ಲ ಎಂದು ಡಬ್ಲ್ಯುಎಚ್‌ಓ ಕಳವಳ ವ್ಯಕ್ತಪಡಿಸಿದೆ ಎಂದು ಹೇಳಲಾಗಿದೆ. ಚೀನಾದಲ್ಲಿ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎನ್ನುವುದು ಡಬ್ಲ್ಯುಎಚ್‌ಓ ನಂಬಿಕೆ ಎಂದು ತುರ್ತು ಸ್ಥಿತಿಗಳ ವಿಭಾಗದ ನಿರ್ದೇಶಕ ಮೈಕೆಲ್ ರಿಯಾನ್ ಹೇಳಿದ್ದಾರೆ.

ಕೋವಿಡ್ ಸಾವಿನಲ್ಲಿ ಯಾವ ಅಂಶಗಳು ಸೇರುತ್ತವೆ ಎನ್ನುವ ಬಗ್ಗೆ ಚೀನಾದ ವ್ಯಾಖ್ಯಾನ ತೀರಾ ಸಂಕುಚಿತ. ಇಂಥ ಸಾವನ್ನು ವರದಿ ಮಾಡುವ ನಿಟ್ಟಿನಲ್ಲಿ ಸರ್ಕಾರಿ ವೈದ್ಯರನ್ನು ಉತ್ತೇಜಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ ಕ್ಷಿಪ್ರವಾಗಿ ಹರಡುತ್ತಿರುವ ಹೊಸ ಪ್ರಬೇಧ ಎಕ್ಸ್‌ಬಿಬಿ 1.5 ವಿರುದ್ಧದ ಹೋರಾಟದಲ್ಲಿ ಅಮೆರಿಕದ ಅಧಿಕಾರಿಗಳ ಸಹಕಾರ ಶ್ಲಾಘನೀಯ ಎಂದು ಅವರು ಹೇಳಿದರು. ಅಮೆರಿಕದ ಪರವಾಗಿ ರ್ಯಾಡಿಕಲ್ ಟ್ರಾನ್ಸ್‌ಫರೆನ್ಸಿ, ಅಮೆರಿಕದ ಅಂಕಿ ಅಂಶಗಳು ಹಾಗೂ ಅದರ ಪರಿಣಾಮಗಳ ಬಗ್ಗೆ ಆರೋಗ್ಯ ಸಂಸ್ಥೆ ಜೊತೆ ತೊಡಗಿಸಿಕೊಂಡಿದೆ ಎಂದು ಅವರು ಶ್ಲಾಘಿಸಿದ್ದಾರೆ.

Similar News