ದ್ವಿತೀಯ ಏಕದಿನ: ಭಾರತದ ಗೆಲುವಿಗೆ 216 ರನ್ ಗುರಿ ನೀಡಿದ ಶ್ರೀಲಂಕಾ

Update: 2023-01-12 11:35 GMT

ಕೋಲ್ಕತಾ, ಜ.12: ಚೊಚ್ಚಲ ಪಂದ್ಯವನ್ನಾಡಿದ ನುವಾನಿದು ಫೆರ್ನಾಂಡೊ ಗಳಿಸಿದ ಅರ್ಧಶತಕದ(50 ರನ್)ನೆರವಿನಿಂದ ಶ್ರೀಲಂಕಾ ಕ್ರಿಕೆಟ್ ತಂಡ ದ್ವಿತೀಯ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಗೆಲುವಿಗೆ 216 ರನ್ ಗುರಿ ನೀಡಿದೆ.

ಪ್ರತಿಷ್ಠಿತ ಈಡನ್‌ಗಾರ್ಡನ್ಸ್ ಸ್ಟೇಡಿಯಮ್‌ನಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 39.4 ಓವರ್‌ಗಳಲ್ಲಿ 215 ರನ್‌ಗೆ ಆಲೌಟಾಯಿತು. ವೇಗದ ಬೌಲರ್ ಮುಹಮ್ಮದ್ ಸಿರಾಜ್(3-30), ಕುಲದೀಪ್ ಯಾದವ್(3-51)ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ಯುವ ವೇಗಿ ಉಮ್ರಾನ್ ಮಲಿಕ್(2-48) ಎರಡು ವಿಕೆಟ್ ಪಡೆದರು.

ಲಂಕೆಯ ಪರ ಫೆರ್ನಾಂಡೊ(50,63 ಎಸೆತ, 6 ಬೌಂಡರಿ)ಸರ್ವಾಧಿಕ ಸ್ಕೋರ್ ಗಳಿಸಿದರು. ಕುಶಾಲ್ ಮೆಂಡಿಸ್(34 ರನ್, 34 ಎಸೆತ), ಡುನಿತ್ ವೆಲ್ಲಲಗೆ(32 ರನ್, 34 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
 

Similar News