ಬ್ರೆಝಿಲ್: ಮಾಜಿ ಸಚಿವರ ಬಂಧನ

Update: 2023-01-14 18:22 GMT

ಬ್ರಸೀಲಿಯಾ, ಜ.14: ಜನವರಿ 8ರಂದು ಬ್ರೆಝಿಲ್ ರಾಜಧಾನಿ ಬ್ರಸೀಲಿಯಾದಲ್ಲಿ ನಡೆದಿದ್ದ ದಂಗೆ ಪ್ರಕರಣಕ್ಕೆ ಸಂಬಂಧಿಸಿ ದೇಶದ ಮಾಜಿ ನ್ಯಾಯ ಸಚಿವ ಆ್ಯಂಡರ್ಸನ್ ಟೋರೆಸ್‌ರನ್ನು ಬಂಧಿಸಲಾಗಿದೆ ಎಂದು ಸರಕಾರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

 ಬ್ರಸೀಲಿಯಾ ದಾಂಧಲೆಯ ಸಂದರ್ಭ ಬೊಲ್ಸನಾರೊ ಜತೆ ಟೋರೆಸ್ ಕೂಡಾ ಅಮೆರಿಕದಲ್ಲಿದ್ದರು. ‘ಆ್ಯಂಡರ್ಸನ್ ಟೋರೆಸ್ ಗಲಭೆಕೋರರೊಂದಿಗೆ ಒಳಸಂಚು ನಡೆಸಿರುವುದಕ್ಕೆ ಪುರಾವೆಯಿದೆ. ಅವರು ಸೋಮವಾರದ ಒಳಗೆ ದೇಶಕ್ಕೆ ಹಿಂದಿರುಗದಿದ್ದರೆ ಅವರನ್ನು ಹಸ್ತಾಂತರಿಸುವ ಕೋರಿಕೆ ಮಂಡಿಸಲಾಗುವುದು’ ಎಂದು ಬ್ರೆಝಿಲ್ ಸರಕಾರ ಶುಕ್ರವಾರ ಎಚ್ಚರಿಕೆ ನೀಡಿತ್ತು.

Similar News