ಮೂರನೇ ಏಕದಿನ: ಗಿಲ್, ಕೊಹ್ಲಿ ಭರ್ಜರಿ ಶತಕ, ಶ್ರೀಲಂಕಾಕ್ಕೆ 391 ರನ್ ಗುರಿ ನೀಡಿದ ಭಾರತ

Update: 2023-01-15 12:08 GMT

ತಿರುವನಂತಪುರ, ಜ.15: ಮಾಜಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ (ಔಟಾಗದೆ 166 ರನ್, 110 ಎಸೆತ, 13 ಬೌಂಡರಿ, 8 ಸಿಕ್ಸರ್) ಹಾಗೂ ಶುಭಮನ್ ಗಿಲ್ ಶತಕದ ಸಹಾಯದಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್ ಗಳಿಸಿದೆ. ಲಂಕೆಯ ಗೆಲುವಿಗೆ ಕಠಿಣ ಗುರಿ ನೀಡಿದೆ.

    ಗ್ರೀನ್‌ಫೀಲ್ಡ್ ಇಂಟರ್‌ನ್ಯಾಶನಲ್ ಸ್ಟೇಡಿಯಮ್‌ನಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಇನಿಂಗ್ಸ್ ಆರಂಭಿಸಿದ ರೋಹಿತ್(42 ರನ್, 49 ಎಸೆತ, 2 ಬೌಂಡರಿ, 3 ಸಿ.)ಹಾಗೂ ಗಿಲ್(116 ರನ್, 97 ಎಸೆತ, 14 ಬೌಂಡರಿ, 2 ಸಿಕ್ಸರ್)ಮೊದಲ ವಿಕೆಟಿಗೆ 95 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.

46ನೇ ಏಕದಿನ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಮಿಂಚಿದರು. ಗಿಲ್ ಜೊತೆಗೆ 2ನೇ ವಿಕೆಟಿಗೆ 131 ರನ್ ಹಾಗೂ ಶ್ರೇಯಸ್ ಅಯ್ಯರ್(38 ರನ್, 32 ಎಸೆತ) ಜೊತೆಗೆ 3ನೇ ವಿಕೆಟಿಗೆ 108 ರನ್ ಜೊತೆಯಾಟದಲ್ಲಿ ಪಾಲ್ಗೊಂಡ ಕೊಹ್ಲಿ ಭಾರತವು ದೊಡ್ಡ ಮೊತ್ತ ಗಳಿಸಲು ನೆರವಾದರು.

ಲಂಕಾದ ಪರ ಕಸುನ್ ರಜಿಥಾ(2-81), ಲಹಿರು ಕುಮಾರ(2-87) ತಲಾ ಎರಡು ವಿಕೆಟ್ ಪಡೆದರು.

Similar News