×
Ad

ಹೆಲಿಕಾಪ್ಟರ್‌ ಅಪಘಾತ: ಉಕ್ರೇನ್‌ ಸಚಿವ ಸೇರಿದಂತೆ 18 ಮಂದಿ ಮೃತ್ಯು

Update: 2023-01-18 14:22 IST

ಕೀವ್,ಜ.18: ಉಕ್ರೇನ್ ರಾಜಧಾನಿ ಕೀವ್ ನ ಹೊರವಲಯದಲ್ಲಿ ಬುಧವಾರ ನಡೆದ ಹೆಲಿಕಾಪ್ಟರ್ ಅವಘಡದಲ್ಲಿ ಉಕ್ರೇನ್ನ ಆಂತರಿಕ ಸಚಿವ ಸೇರಿದಂತೆ 18 ಮಂದಿ ದಾರುಣ ಸಾವನ್ನಪ್ಪಿದ್ದಾರೆ

.ಆಂತರಿಕಸಚಿವ ಡೆನಿಸ್ ಮೊನಾಸ್ಟಿರ್ಸ್ಕಿಯಿ, ಅವರ ಸಹಾಯಕ ಸಚಿವ ಯೆವ್ಹೆನ್ ಯೆನಿನ್ ಹಾಗೂ ಆಂತರಿಕ ಸಚಿವಾಲಯದ ಸಹಾಯಕ ಕಾರ್ಯದರ್ಶಿ ಯುರಿಲ್ಲುಬ್ಕೊವಿಚ್ ಮೃತಪಟ್ಟವರಲ್ಲಿ ಸೇರಿದ್ದಾರೆ. ಇವರೆಲ್ಲರೂ ತುರ್ತು ಸೇವಾ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದಾಗ ದುರಂತ ಸಂಭವಿಸಿದೆ. ದುರಂತ ಸಂಭವಿಸಿದಾಗ ಹೆಲಿಕಾಪ್ಟರ್ನಲ್ಲಿ ಒಟ್ಟು 9 ಮಂದಿ ಪ್ರಯಾಣಿಸುತ್ತಿದ್ದರೆನ್ನಲಾಗಿದೆ.ಮೊನಾಸ್ಟಿರ್ಸ್ಕಿಯಿ ಅವರು, ಸರಿಸುಮಾರು 11 ತಿಂಗಳುಗಳ ಹಿಂದೆ ರಶ್ಯ ಆಕ್ರಮಣ ಆರಂಭವಾದಾಗಿನಿಂದ ಸಾವನ್ನಪ್ಪಿದ ಉಕ್ರೇನ್ನ ಅತ್ಯಂತ ಹಿರಿಯ ಸಚಿವರಾಗಿದ್ದಾರೆ.

ಉಕ್ರೇನ್ ರಾಜಧಾನಿ ಕೀವ್ನ ಪೂರ್ವಭಾಗದ ಉಪನಗರವಾದ ಬ್ರೊವಾರಿಯಲ್ಲಿ ಶಿಶುವಿಹಾರವೊಂದರ ಸಮೀಪ ಹೆಲಿಕಾಪ್ಟರ್ ಪತನಗೊಂಡಿತೆಂದು ಮೂಲಗಳು ತಿಳಿಸಿವೆ. ಹೆಲಿಕಾಪ್ಟರ್ನಲ್ಲಿದ್ದ ಎಲ್ಲಾ 9 ಮಂದಿ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಶಿಶುವಿಹಾರದ ಸಮೀಪದಲ್ಲಿದ್ದ ಮೂವರು ಮಕ್ಕಳು ಹಾಗೂ 6 ನಾಗರಿಕರು ಸಾವನ್ನಪ್ಪಿದ್ದಾರೆ. 

ಘಟನೆಯಲ್ಲಿ 15 ಮಂದಿ ಮಕ್ಕಳು ಸೇರಿದಂತೆ ಒಟ್ಟು 29 ಮಂದಿ ಗಾಯಗೊಂಡಿದ್ದಾರೆ.ಆದರೆ ಈ ಅಪಘಾತವು ಉಕ್ರೇನ್-ರಶ್ಯ ಸಮರದ ಪರಿಣಾಮವೇ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಉಕ್ರೇನ್ ಹೆಲಿಕಾಪ್ಟರ್ ದುರಂತವು ಉಕ್ರೇನಿ ನಾಗರಿಕರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ರಶ್ಯದ ಆಕ್ರಮಣದ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರುವ ಉಕ್ರೇನ್ಗೆ ಈ ದುರಂತವು ಆಘಾತವನ್ನುಂಟುಮ ಮಾಡಿದೆ.

ಸ್ವಿಟ್ಜರ್ಲ್ಯಾಂಡ್ನ ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಂಡಿದ್ದ ಉಕ್ರೇನ್ನ ಪ್ರಥಮ ಮಹಿಳೆ, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಪತ್ನಿ ಒಲೆನಾ ಝೆಲೆನ್ಸ್ಕಿ ದುರಂತ ಸುದ್ದಿ ಕೇಳುತ್ತಿದ್ದಂತೆಯೇ ವೇದಿಕೆಯಲ್ಲಿಯೇ ಕಂಬನಿ ಮಿಡಿದರು. ಆನಂತರ ಹೆಲಿಕಾಪ್ಟರ್ ದುರಂತದಲ್ಲಿ ಮಡಿದವರ ಗೌರವಾರ್ಥ ಸಮಾವೇಶದಲ್ಲಿ 15 ಸೆಕೆಂಡ್ಗಳ ಮೌನ ಆಚರಿಸಲಾಯಿತು.

Similar News