ಎರಡನೇ ಬಾರಿ ಆರ್ಸಿಬಿ ಟ್ವಿಟರ್‌ ಅಕೌಂಟ್‌ ಹ್ಯಾಕ್ ಮಾಡಿ ಹೆಸರು ಬದಲಾಯಿಸಿದ ಅನಾಮಿಕರು !

Update: 2023-01-21 14:42 GMT

ಬೆಂಗಳೂರು: ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದರ ಅಧಿಕೃತ ಟ್ವಿಟರ್ ಖಾತೆಯನ್ನು ಶನಿವಾರ ಹ್ಯಾಕ್ ಮಾಡಲಾಗಿದೆ. ಹ್ಯಾಕರ್‌ಗಳು ಡಿಸ್‌ಪ್ಲೇ ಚಿತ್ರವನ್ನು ಬದಲಾಯಿಸಿದ್ದು, ಪ್ರೊಫೈಲ್ ಹೆಸರನ್ನು 'ಬೋರ್ಡ್ ಏಪ್ ಯಾಚ್ ಕ್ಲಬ್' ಎಂದು ಬದಲಾಯಿಸಿದ್ದಾರೆ. ಖಾತೆಯ ಫಾಲೋವರ್ಸ್‌ಗಳು ಆರ್‌ಸಿಬಿ ಟೈಮ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ NFT-ಸಂಬಂಧಿತ ಟ್ವೀಟ್‌ಗಳನ್ನು ನೋಡಿದಾಗ ಪರಿಸ್ಥಿತಿಯ ಸುಳಿವು ಸಿಕ್ಕಿದೆ. ಹ್ಯಾಕರ್‌ಗಳು ಇತರ ಕೆಲವು NFT ಸಂಬಂಧಿತ ಬಳಕೆದಾರರನ್ನು ರಿಟ್ವೀಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಹ್ಯಾಕ್‌ ಮಾಡಲಾದ ಕುರಿತು ಆರ್‌ಸಿಬಿ ಫ್ರಾಂಚೈಸಿಯ ಅಧಿಕೃತ ಹೇಳಿಕೆಯು "RCB ಯ ಟ್ವಿಟರ್ ಹ್ಯಾಂಡಲ್ ಅನ್ನು 21 ಜನವರಿ 2023 ರಂದು ಮುಂಜಾನೆ 4 ಗಂಟೆಯ ಸುಮಾರಿಗೆ ಹ್ಯಾಕ್‌ ಮಾಡಲಾಗಿದೆ ಮತ್ತು ಸದ್ಯಕ್ಕೆ ನಾವು ಖಾತೆಗೆ ಪ್ರವೇಶವನ್ನು ಕಳೆದುಕೊಂಡಿದ್ದೇವೆ. ಟ್ವಿಟರ್ ಶಿಫಾರಸು ಮಾಡಿದ ಎಲ್ಲಾ ಭದ್ರತಾ ಕ್ರಮಗಳನ್ನು ತೆಗೆದುಕೊಂಡರೂ ನಮ್ಮ ನಿಯಂತ್ರಣಕ್ಕೆ ಮೀರಿ ಈ ದುರದೃಷ್ಟಕರ ಘಟನೆ ಸಂಭವಿಸಿದೆ. ಇಂದು ನಮ್ಮ ಖಾತೆಯಿಂದ ಪೋಸ್ಟ್‌ ಆದ ಯಾವುದೇ ಟ್ವೀಟ್‌ಗಳು/ರೀಟ್ವೀಟ್‌ಗಳನ್ನು  ಬೆಂಬಲಿಸಬೇಡಿ ಮತ್ತು ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲು ನಾವು ಟ್ವಿಟರ್ ತಂಡದೊಂದಿಗೆ ಕೆಕಾರ್ಯನಿರತರಾಗಿದ್ದೇವೆ. ನಾವು ಶೀಘ್ರದಲ್ಲೇ ಹಿಂತಿರುಗುತ್ತೇವೆ." ಎಂದು ಹೇಳಿದೆ.

Similar News