ಥೈಲ್ಯಾಂಡ್‌ನಲ್ಲಿ ವಾಹನ ಅಪಘಾತ: 2 ಮಕ್ಕಳ ಸಹಿತ 11 ಮಂದಿ ಸಜೀವ ದಹನ

Update: 2023-01-23 18:00 GMT

ಬ್ಯಾಂಕಾಕ್, ಜ.23: ಥೈಲ್ಯಾಂಡ್‌ನಲ್ಲಿ ಚಂದ್ರಮಾನ ಹೊಸವರ್ಷಾಚರಣೆಯಲ್ಲಿ ಪಾಲ್ಗೊಂಡಿದ್ದವರು ಪ್ರಯಾಣಿಸುತ್ತಿದ್ದ ವ್ಯಾನ್ ಅಪಘಾತಕ್ಕೀಡಾಗಿದ್ದು ಇಬ್ಬರು ಮಕ್ಕಳ ಸಹಿತ 11 ಮಂದಿ ಮೃತಪಟ್ಟಿರುವುದಾಗಿ ಪೊಲೀಸರು ಸೋಮವಾರ ಹೇಳಿದ್ದಾರೆ.

ಈಶಾನ್ಯದ ಅಮ್ನಟ್ ಕರೋಯಿನ್ ಪ್ರಾಂತದಿಂದ ಬ್ಯಾಂಕಾಕ್‌ಗೆ ಪ್ರಯಾಣಿಸುತ್ತಿದ್ದ ವ್ಯಾನ್‍ನಲ್ಲಿ 12 ಪ್ರಯಾಣಿಕರಿದ್ದರು. ಮಧ್ಯ ಥೈಲ್ಯಾಂಡ್‌ನ ನಖೋನ್ ರಚಸಿಮಾ ಪ್ರಾಂತದ ಹೆದ್ದಾರಿಯ ಬಳಿಯ ಕಂದಕಕ್ಕೆ ಉರುಳಿ ಬಿದ್ದಾಗ ವ್ಯಾನ್ಗೆ ಬೆಂಕಿ ಹತ್ತಿಕೊಂಡು ದುರಂತ ಸಂಭವಿಸಿದೆ. ವ್ಯಾನ್ನಲ್ಲಿದ್ದ ಒಬ್ಬ ವ್ಯಕ್ತಿ ಕಿಟಕಿ ಗಾಜನ್ನು ಒಡೆದು ಹೊರಬಂದಿದ್ದಾನೆ. ಆದರೆ ಉಳಿದವರು  ವ್ಯಾನ್‌ನಿಂದ ಹೊರಬರಲಾರದೆ ಜೀವಂತ ದಹನವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉರುಳಿ ಬಿದ್ದ ವ್ಯಾನ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದೆ ಎಂದು ವರದಿಯಾಗಿದೆ.

Similar News