ನ್ಯೂಝಿಲ್ಯಾಂಡ್ ನ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಕಿನ್ಸ್ ಪ್ರಮಾಣವಚನ ಸ್ವೀಕಾರ

Update: 2023-01-25 06:59 GMT

ಆಕ್ಲೆಂಡ್: ನಿರ್ಗಮನ ಪ್ರಧಾನಿ ಜಸಿಂಡಾ ಅರ್ಡೆರ್ನ್ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ ಬುಧವಾರ ನಡೆದ ಔಪಚಾರಿಕ ಸಮಾರಂಭದಲ್ಲಿ ಲೇಬರ್ ಪಕ್ಷದ  ನಾಯಕ ಕ್ರಿಸ್ ಹಿಪ್ಕಿನ್ಸ್ ನ್ಯೂಝಿಲ್ಯಾಂಡ್ ನ 41 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಎಂದು ರಾಯಿಟರ್ಸ್ ವರದಿ ಮಾಡಿದೆ.

ಲೇಬರ್ ಪಕ್ಷವು ಈ ಹಿಂದೆ ಕೋವಿಡ್ -19  ಸಮರ್ಥವಾಗಿ ನಿಭಾಯಿಸಿರುವ ಹಾಗೂ ಸಚಿವರಾಗಿದ್ದ 44ರ ವಯಸ್ಸಿನ  ಹಿಪ್ಕಿನ್ಸ್ ಅವರನ್ನು ಪ್ರಧಾನಿ ಹುದ್ದೆಗೆ  ಆಯ್ಕೆ ಮಾಡಿದೆ. 42 ವರ್ಷದ ಅರ್ಡೆರ್ನ್ ಅವರ ಅನಿರೀಕ್ಷಿತ ರಾಜೀನಾಮೆಯ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ.

Similar News