ಇಮ್ರಾನ್ ಪಕ್ಷದ ಮುಖಂಡ ಫವಾದ್ ಬಂಧನ

Update: 2023-01-25 18:16 GMT

ಇಸ್ಲಮಾಬಾದ್, ಜ.25: ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(PTI) ಪಕ್ಷದ ಮುಖಂಡ ಫವಾದ್ ಚೌಧ್ರಿಯನ್ನು ಲಾಹೋರ್ನ ನಿವಾಸದಿಂದ ಪೊಲೀಸರು ಬಂಧಿಸಿದ್ದಾರೆ ಎಂದು ಪಕ್ಷದ ಮೂಲವನ್ನು ಉಲ್ಲೇಖಿಸಿ `ಡಾನ್' ವರದಿ ಮಾಡಿದೆ.

ಪಿಟಿಐ ಮುಖಂಡ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ರನ್ನು ಬಂಧಿಸಲು ಪಾಕ್ ಸರಕಾರ ಪಿತೂರಿ ನಡೆಸಿದೆ ಎಂದು ಫವಾದ್ ಸಾರ್ವಜನಿಕವಾಗಿ ಟೀಕಿಸಿದ ಬೆನ್ನಲ್ಲೇ ಅವರ ಬಂಧನವಾಗಿದೆ. ಗುಂಪುಗಳ ನಡುವೆ ದ್ವೇಷಪ್ರಸಾರ, ಕ್ರಿಮಿನಲ್ ಬೆದರಿಕೆ, ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆ ನೀಡಿರುವುದು ಮತ್ತು  ದೇಶದ್ರೋಹದ ಪ್ರಕರಣವನ್ನು ಫವಾದ್ ವಿರುದ್ಧ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.

ಪಾಕ್ ಸರಕಾರ ಇಮ್ರಾನ್ಖಾನ್ರನ್ನು ಬಂಧಿಸಲು ಪಿತೂರಿ ಹೂಡಿದೆ. ಇದಕ್ಕೆ ಆಸ್ಪದ ನೀಡುವುದಿಲ್ಲ ಎಂದು ಖಂಡಿಸಿ   ಲಾಹೋರ್ನ ಇಮ್ರಾನ್‌ ಖಾನ್ ಮನೆಯೆದುರು ಪಿಟಿಐ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ನೇತೃತ್ವವನ್ನು ಫವಾದ್ ವಹಿಸಿದ್ದರು.

Similar News