ನೌಕರರ ವಜಾ: ಈಗ ಅಮೆರಿಕದ ಹೆಸರಾಂತ ಐಟಿ ಸಂಸ್ಥೆ ಐಬಿಎಂ ಸರದಿ

Update: 2023-01-26 06:56 GMT

 ವಾಶಿಂಗ್ಟನ್: ಅಮೆರಿಕದ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಬಿಎಂ(IBM ) ಆಸ್ತಿ ವಿನಿಯೋಗದ ಭಾಗವಾಗಿ 3,900 ನೌಕರರನ್ನು ಕೆಲಸದಿಂದ ವಜಾಗೊಳಿಸುವುದಾಗಿ ಗುರುವಾರ ಹೇಳಿದೆ.

ಆರ್ಥಿಕ ಪರಿಸ್ಥಿತಿಯು ಸವಾಲಿನಿಂದ ಕೂಡಿರುವ ಕಾರಣ ಕಂಪನಿಗೆ ಹೊಸ ರೂಪ ನೀಡುವ ಪ್ರಕ್ರಿಯೆ ಭಾಗವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎದು ಕಂಪೆನಿ ತಿಳಿಸಿದೆ.

ನಿರ್ದಿಷ್ಟ ಪ್ರದೇಶಗಳಲ್ಲಿ ಹೊಸ ನೌಕರರನ್ನು ನೇಮಕ ಮಾಡಿಕೊಳ್ಳುವುದನ್ನು ಮುಂದುವರಿಸಲಾಗುವುದು ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಜೇಮ್ಸ್ ಕವನಾಗ್ ಹೇಳಿದ್ದಾರೆ.

ಇತ್ತೀಚೆಗೆ ಇ-ಕಾಮರ್ಸ್ ದೈತ್ಯ ಅಮೆಝಾನ್ ಕಂಪನಿ ಭಾರತದಲ್ಲಿ 1000 ಸೇರಿದಂತೆ ಜಾಗತಿಕವಾಗಿ 18 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಎಚ್ ಪಿ, ಮೆಟಾ ಹಾಗೂ ಟ್ವಿಟರ್ ನಂತಹ ಕಂಪನಿಗಳು ಕೂಡ ವೆಚ್ಚ ತಗ್ಗಿಸುವ ಭಾಗವಾಗಿ ಉದ್ಯೋಗ ಕಡಿತದ ಮೊರೆ ಹೋಗಿವೆ.

Similar News