ಭಾರತ-ನ್ಯೂಝಿಲ್ಯಾಂಡ್ 2ನೇ ಟ್ವೆಂಟಿ ಪಂದ್ಯಕ್ಕೆ ಕಳಪೆ ಪಿಚ್ ಸಿದ್ಧಪಡಿಸಿದ ಲಕ್ನೊ ಪಿಚ್ ಕ್ಯುರೇಟರ್ ವಜಾ: ವರದಿ

Update: 2023-01-31 07:00 GMT

ಲಕ್ನೊ: ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ ಟಿ 20 ಪಂ,ದ್ಯಕ್ಕೆ ಕಳಪೆ ಪಿಚ್ ಸಿದ್ಧಪಡಿಸಿದ ನಂತರ ಲಕ್ನೊದ ಏಕಾನಾ ಕ್ರಿಕೆಟ್ ಸ್ಟೇಡಿಯಂನ ಕ್ಯುರೇಟರ್ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.

 ರವಿವಾರ ನಡೆದ ಪಂದ್ಯವನ್ನು ಭಾರತ ಇನ್ನೂ ಒಂದು ಚೆಂಡು ಬಾಕಿ ಇರುವಂತೆಯೇ ಗೆದ್ದರೂ, ನಾಯಕ ಹಾರ್ದಿಕ್ ಪಾಂಡ್ಯ ಅವರು ಲಕ್ನೋ ಪಿಚ್  ಅನ್ನು "ಶಾಕರ್" ಎಂದು ಕರೆದಿದ್ದರು.

ನ್ಯೂಝಿಲ್ಯಾಂಡ್  ಎಂಟು ವಿಕೆಟ್‌ ನಷ್ಟಕ್ಕೆ  99 ರನ್‌ ಗಳಿಸಲಷ್ಟೇ ಶಕ್ತವಾಯಿತು ಹಾಗೂ ಹೆಚ್ಚು ತಿರುವು ನೀಡುತ್ತಿದ್ದ ಪಿಚ್ ನಲ್ಲಿ  ಸಣ್ಣ ಗುರಿಯನ್ನು ಬೆನ್ನಟ್ಟಲು ಭಾರತಕ್ಕೆ ಕಷ್ಟಕರವಾಗಿತ್ತು.

"ಕ್ಯುರೇಟರ್ ಅನ್ನು ವಜಾಗೊಳಿಸಲಾಗಿದೆ ಹಾಗೂ ಅನುಭವಿ ಕ್ಯುರೇಟರ್ ಸಂಜೀವ್ ಕುಮಾರ್ ಅಗರ್ವಾಲ್  ಅವರನ್ನು ನೇಮಕ ಮಾಡಲಾಗಿದೆ. ತಿಂಗಳಲ್ಲಿ ನಾವು ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಟ್ವೆಂಟಿ-20 ಗಿಂತ ಮುಂಚಿತವಾಗಿ ಎಲ್ಲಾ ಸೆಂಟರ್ ಪಿಚ್ ಗಳಲ್ಲಿ ಈಗಾಗಲೇ ಸಾಕಷ್ಟು ದೇಶೀಯ ಕ್ರಿಕೆಟ್ ಪಂದ್ಯಗಳನ್ನು ಆಡಲಾಗಿದೆ.  ಅಂತರಾಷ್ಟ್ರೀಯ ಪಂದ್ಯಕ್ಕೆ ಕ್ಯುರೇಟರ್  ಒಂದು ಅಥವಾ ಎರಡು ಸ್ಟ್ರಿಪ್‌ಗಳನ್ನು ಬಿಡಬೇಕಿತ್ತು. ಪಿಚ್ ಅನ್ನು  ಅತಿಯಾಗಿ ಬಳಸಲಾಗಿದೆ. ಕೆಟ್ಟ ಹವಾಮಾನದಿಂದಾಗಿ ತಾಜಾ ಪಿಚ್  ಸಿದ್ಧಗೊಳಿಸಲು ಸಾಕಷ್ಟು ಸಮಯ ಇರಲಿಲ್ಲ" ಎಂದು UPCA ಮೂಲಗಳು  PTI ಗೆ ತಿಳಿಸಿದೆ.

Similar News