ವೀಸಾ ನಿರಾಕರಿಸಿದ ಭಾರತ: ಆಸ್ಟ್ರೇಲಿಯಾದಲ್ಲಿಯೇ ಬಾಕಿಯಾದ ಕ್ರಿಕೆಟಿಗ ಉಸ್ಮಾನ್‌ ಖ್ವಾಜ

Update: 2023-02-01 11:55 GMT

ಸಿಡ್ನಿ: ಬಹುನಿರೀಕ್ಷಿತ ಗಾವಸ್ಕರ್‌ ಟ್ರೋಫಿ ಕ್ರಿಕೆಟ್‌ ಸರಣಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ಭಾರತಕ್ಕೆ ಇಂದು ತೆರಳಿದರೂ ಆಸ್ಟ್ರೇಲಿಯಾದ ಬ್ಯಾಟಿಂಗ್‌ ತಾರೆ ಉಸ್ಮಾನ್‌ ಖ್ವಾಜ (Usman Khawaja) ಮಾತ್ರ ಅಲ್ಲಿಯೇ ಬಾಕಿಯುಳಿಯುವಂತಾಯಿತು. ಖ್ವಾಜ ಅವರಿಗೆ ಭಾರತ ಸರ್ಕಾರ ವೀಸಾ (Visa) ನಿರಾಕರಿಸಿರುವುದೇ ಇದಕ್ಕೆ ಕಾರಣ.

ಪಾಕಿಸ್ತಾನ ಮೂಲದ ಖ್ವಾಜ ತಮ್ಮ ಪರಿಸ್ಥಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಭರಿತ ಚಿತ್ರದೊಂದಿಗೆ ವಿವರಿಸಿದ್ದಾರೆ. "ನಾನು ಭಾರತದ ವೀಸಾಗೆ ಕಾಯುತ್ತಿರುವುದು ಹೀಗಿದೆ... #stranded #dontleaveme #standard #anytimenow," ಎಂದು ಬರೆದಿದ್ದಾರೆ.

ಆಸ್ಟ್ರೇಲಿಯಾದ 17 ಮಂದಿಯ ತಂಡದಲ್ಲಿ ಭಾರತೀಯ ವೀಸಾ ನಿರಾಕರಿಸಲ್ಪಟ್ಟ ಏಕೈಕ ಆಟಗಾರ ಖ್ವಾಜ ಆಗಿದ್ದಾರೆ. ಕಳೆದ ತಿಂಗಳೇ ಅವರು ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದರು.

ಭಾರತದ ಸರ್ಕಾರ ಅವರ ವೀಸಾ ಅನುಮೋದನೆಗೆ ವಿಳಂಬಿಸಿದೆಯೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಸಮಸ್ಯೆ ಶೀಘ್ರ ಇತ್ಯರ್ಥವಾಗಬಹುದೆಂಬ ನಿರೀಕ್ಷೆಯನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಇಟ್ಟುಕೊಂಡಿದೆ.

Similar News