ಮೂರನೇ ಟ್ವೆಂಟಿ-20: ನ್ಯೂಝಿಲ್ಯಾಂಡ್ ಗೆಲುವಿಗೆ 235 ರನ್ ಗುರಿ

ಶುಭಮನ್ ಗಿಲ್ ಚೊಚ್ಚಲ ಶತಕ

Update: 2023-02-01 15:23 GMT

ಅಹಮದಾಬಾದ್, ಫೆ.1: ಶುಭಮನ್ ಗಿಲ್(ಔಟಾಗದೆ 126 ರನ್,63 ಎಸೆತ, 12 ಬೌಂಡರಿ, 7 ಸಿಕ್ಸರ್) ಚೊಚ್ಚಲ ಶತಕದ ಸಹಾಯದಿಂದ ನ್ಯೂಝಿಲ್ಯಾಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಭಾರತ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದ ಗೆಲುವಿಗೆ 235 ರನ್ ಗುರಿ ನೀಡಿದೆ.

ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಲು ಶಕ್ತವಾಯಿತು.

ಶುಭಮನ್ ಗಿಲ್ ಬೌಂಡರಿ ಬಾರಿಸುವ ಮೂಲಕ ಚೊಚ್ಚಲ ಶತಕ ಪೂರೈಸಿದರು. ಟಿ-20ಯಲ್ಲಿ ಶತಕ ಸಿಡಿಸಿದ ಭಾರತದ 5ನೇ ಆಟಗಾರ ಎನಿಸಿಕೊಂಡರು.
 
ರಾಹುಲ್ ತ್ರಿಪಾಠಿ 44 ರನ್, ಹಾರ್ದಿಕ್ ಪಾಂಡ್ಯ 30 ರನ್, ಸೂರ್ಯಕುಮಾರ್ 24 ರನ್ ಗಳಿಸಿದರು. ಆರಂಭಿಕ ಆಟಗಾರ ಇಶಾನ್ ಕಿಶನ್ ಕೇವಲ 1 ರನ್ ಗಳಿಸಿ ಕಳಪೆ ಪ್ರದರ್ಶನ ಮುಂದುವರಿಸಿದರು.

Similar News