×
Ad

ಮೂರನೇ ಟ್ವೆಂಟಿ-20: ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಸರಣಿ ಕೈವಶ

ಶುಭಮನ್ ಗಿಲ್ ಚೊಚ್ಚಲ ಶತಕ ,ಹಾರ್ದಿಕ್‌ಗೆ 4 ವಿಕೆಟ್

Update: 2023-02-01 22:17 IST

ಅಹಮದಾಬಾದ್, ಫೆ.1: ಶುಭಮನ್ ಗಿಲ್(ಔಟಾಗದೆ 126 ರನ್,63 ಎಸೆತ, 12 ಬೌಂಡರಿ, 7 ಸಿಕ್ಸರ್) ಚೊಚ್ಚಲ ಶತಕ ಹಾಗೂ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ(4-16) ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ಸಹಾಯದಿಂದ ನ್ಯೂಝಿಲ್ಯಾಂಡ್ ಮೇಲೆ ಸವಾರಿ ಮಾಡಿದ ಭಾರತ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯವನ್ನು 168 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

 ಬುಧವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 235 ರನ್ ಗುರಿ ಬೆನ್ನಟ್ಟಿದ ಕಿವೀಸ್ ತಂಡ ಸ್ವಲ್ಪವೂ ಹೋರಾಟ ನೀಡದೆ 12.1 ಓವರ್‌ಗಳಲ್ಲಿ ಕೇವಲ 66 ರನ್‌ಗೆ ಗಂಟುಮೂಟೆ ಕಟ್ಟಿತು. ತಂಡದ ಪರ ಡರ್ಲ್ ಮಿಚೆಲ್(35 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು.

ಭಾರತದ ಬೌಲಿಂಗ್‌ನಲ್ಲಿ ಪಾಂಡ್ಯ ತವರು ಮೈದಾನದಲ್ಲಿ ಮಿಂಚಿದರೆ, ಉಮ್ರಾನ್ ಮಲಿಕ್(2-9), ಅರ್ಷದೀಪ್ ಸಿಂಗ್(2-16) ಹಾಗೂ ಶಿವಂ ಮಾವಿ(2-12) ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಇದಕ್ಕೂ ಮೊದಲು ಟಾಸ್ ಜಯಿಸಿದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಲು ಶಕ್ತವಾಯಿತು.

Similar News