ಬ್ರಿಟನ್: ವೇತನ ಏರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Update: 2023-02-01 17:12 GMT

ಲಂಡನ್, ಫೆ.1: ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಹಣದುಬ್ಬರದ ಪ್ರಮಾಣಕ್ಕೆ ಅನುಗುಣವಾಗಿ ವೇತನವನ್ನು ಏರಿಕೆ ಮಾಡಬೇಕೆಂದು ಆಗ್ರಹಿಸಿ ಬ್ರಿಟನ್ನಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಆಶ್ರಯದಲ್ಲಿ ನಡೆಯುತ್ತಿರುವ ಮುಷ್ಕರದ  ಅಂಗವಾಗಿ ಬುಧವಾರ  ಕಾರ್ಮಿಕ ಸಂಘಟನೆಗಳ ಸುಮಾರು 4,75,000ದಷ್ಟು ಸದಸ್ಯರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‌ಬುಧವಾರದ ಮುಷ್ಕರದಲ್ಲಿ ಶಿಕ್ಷಕರು ಮತ್ತು ರೈಲಿನ ಚಾಲಕರು ಪಾಲ್ಗೊಂಡಿದ್ದರಿಂದ ಶಾಲೆಗಳು ಬಂದ್ ಆಗಿತ್ತು ಮತ್ತು ಲಂಡನ್ನ ಪ್ರಮುಖ ರೈಲುನಿಲ್ದಾಣಗಳಾದ ವಿಕ್ಟೋರಿಯಾ, ಕ್ಯಾನನ್ ಸ್ಟ್ರೀಟ್, ಮೆರ್ಲಿಬೋನ್ ಮತ್ತು ಲಂಡನ್ ಬ್ರಿಜ್ ಗಳಲ್ಲಿ ರೈಲು ಸೇವೆ ಲಭ್ಯವಿಲ್ಲದೆ ಸಾವಿರಾರು ಸಿಬಂದಿಗಳು ಮನೆಯಲ್ಲೇ ಕೆಲಸ ಮಾಡುವಂತಾಗಿದೆ. ಕಳೆದ ವರ್ಷ ಬ್ರಿಟನ್ನಲ್ಲಿ ಹಣದುಬ್ಬರದ ಪ್ರಮಾಣ 10%ಕ್ಕೂ ಅಧಿಕವಾಗಿದ್ದರೆ, ವೇತನದಲ್ಲಿ 5%ಕ್ಕೂ ಕಡಿಮೆ ಏರಿಕೆಯಾಗಿದೆ ಎಂದು ಕಾರ್ಮಿಕರು ಅಸಮಾಧಾನಗೊಂಡಿದ್ದಾರೆ.

ದೇಶದ 85%ದಷ್ಟು ಶಾಲೆಗಳು ಪ್ರತಿಭಟನೆಯ ಕಾರಣ ಬಂದ್ ಆಗಿವೆ ಎಂದು ರಾಷ್ಟ್ರೀಯ ಶಿಕ್ಷಣ ಯೂನಿಯನ್ ಹೇಳಿದೆ.

Similar News