​ಪಾಕಿಸ್ತಾನ: ಅಪಘಾತದಲ್ಲಿ 17 ಪ್ರಯಾಣಿಕರ ಮೃತ್ಯು

Update: 2023-02-03 18:09 GMT

ಇಸ್ಲಮಾಬಾದ್, ಫೆ.3: ವಾಯವ್ಯ ಪಾಕಿಸ್ತಾನದಲ್ಲಿ ಗುರುವಾರ ರಾತ್ರಿ ಪ್ರಯಾಣಿಕರ ಬಸ್ಸು ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಕನಿಷ್ಟ 17 ಮಂದಿ ಪ್ರಯಾಣಿಕರು ಮೃತಪಟ್ಟಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಖೈಬರ್ ಪಖ್ತೂಂಕ್ವಾ ಪ್ರಾಂತದ ಕೊಹಾಟ್ ಜಿಲ್ಲೆಯಲ್ಲಿನ ಸುರಂಗ ಮಾರ್ಗದ ಬಳಿ ಈ ಅಪಘಾತ ನಡೆದಿದೆ. ಮಹಿಳೆಯರು ಮತ್ತು ಮಕ್ಕಳ ಸಹಿತ 17 ಮಂದಿ ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Similar News