ಡೋಪಿಂಗ್ ಪರೀಕ್ಷೆಯಲ್ಲಿ ವಿಫಲ: ದೀಪಾ ಕರ್ಮಾಕರ್ ಗೆ 21 ತಿಂಗಳ ನಿಷೇಧ

Update: 2023-02-04 07:27 GMT

ಹೊಸದಿಲ್ಲಿ: ಭಾರತದ ಸ್ಟಾರ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು, ಇಂಟರ್ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಐಟಿಎ) ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಕಾರಣ 21 ತಿಂಗಳ ನಿಷೇಧಕ್ಕೆ ಒಳಗಾಗಿದ್ದಾರೆ.

ಕಳೆದ ವರ್ಷ ದೀಪಾರನ್ನು ಇಂಟರ್ನ್ಯಾಷನಲ್ ಜಿಮ್ನಾಸ್ಟಿಕ್ಸ್ ಫೆಡರೇಶನ್ (ಎಫ್‌ಐಜಿ) "ಅಮಾನತು" ಗೊಳಿಸಿರುವುದು ಡೋಪಿಂಗ್ ಅಪರಾಧಕ್ಕೆ ಸಂಬಂಧಿಸಿರುವುದಲ್ಲ ಎಂದು ಭಾರತೀಯ ಅಧಿಕಾರಿಗಳು ನೀಡಿದ್ದ ಹೇಳಿಕೆಗಳಿಗೆ ವಿರುದ್ಧವಾಗಿ ಈ ಬೆಳವಣಿಗೆ ನಡೆದಿದೆ.

ಇಂಟರ್ನ್ಯಾಷನಲ್ ಜಿಮ್ನಾಸ್ಟಿಕ್ಸ್ ಫೆಡರೇಶನ್ (ಎಫ್‌ಐಜಿ) ನ ಡೋಪಿಂಗ್ ವಿರೋಧಿ ಕಾರ್ಯಕ್ರಮವನ್ನು ನಿರ್ವಹಿಸುವ ಸ್ವತಂತ್ರ ಸಂಸ್ಥೆಯಾದ ಐಟಿಎ ಸ್ಪರ್ಧೆಯಿಂದ ಹೊರಗೆ ಸಂಗ್ರಹಿಸಿದ ಕರ್ಮಾಕರ್ ಅವರ ಡೋಪ್ ಮಾದರಿಯಲ್ಲಿ ಹೈಜೆನಾಮೈನ್ ಇರುವುದು ಕಂಡುಬಂದಿದೆ.  ಹೈಜೆನಾಮೈನ್ ವಿಶ್ವ ಡೋಪಿಂಗ್ ವಿರೋಧಿ ಏಜೆನ್ಸಿ ಕೋಡ್ ಅಡಿಯಲ್ಲಿ ನಿಷೇಧಿತ ವಸ್ತುವಾಗಿದೆ.

ಕರ್ಮಾಕರ್ ನಿಷೇಧದ ಅವಧಿಯು  ಮಾದರಿಯನ್ನು ಸಂಗ್ರಹಿಸಿದ ದಿನದಿಂದ (ಅಕ್ಟೋಬರ್ 11, 2021) ಆರಂಭವಾಗಿ  ಈ ವರ್ಷದ ಜುಲೈ 10 ರಂದು ಕೊನೆಗೊಳ್ಳುತ್ತದೆ.

Similar News