ಟೆಸ್ಲಾ ಟ್ವೀಟ್ ಪ್ರಕರಣ: ಮಸ್ಕ್ ಗೆ ಕ್ಲೀನ್ ಚಿಟ್

Update: 2023-02-04 17:08 GMT

ವಾಷಿಂಗ್ಟನ್, ಫೆ.4: ಟೆಸ್ಲಾವನ್ನು ಖಾಸಗಿ ಸಂಸ್ಥೆಯಾಗಿ ಬೆಳೆಸುವಷ್ಟು ಬಂಡವಾಳ ಸಂಗ್ರಹವಾಗಿದೆ ಎಂದು ಟ್ವೀಟ್ ಮಾಡಿ ಹೂಡಿಕೆದಾರರನ್ನು ವಂಚಿಸಿದ್ದಾರೆ ಎಂಬ  ಪ್ರಕರಣದಲ್ಲಿ ಅಮೆರಿಕದ ನ್ಯಾಯಾಲಯವು ಟೆಸ್ಲಾ ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ಕ್ಲೀನ್ಚಿಟ್ ನೀಡಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.

2018ರಲ್ಲಿ ಮಸ್ಕ್ ಮಾಡಿದ್ದ ಈ ಟ್ವೀಟ್  ಮೇಲೆ ವಿಶ್ವಾಸವಿರಿಸಿ ತಾವು ಟೆಸ್ಲಾದ ಶೇರುಗಳ ಮೇಲೆ ಬಂಡವಾಳ ಹೂಡಿಕೆ ಮಾಡಿದ್ದೆವು ಎಂದು ಅರ್ಜಿದಾರರು ವಾದಿಸಿದ್ದರು. ಆದರೆ ಈ ಆರೋಪಕ್ಕೆ ಸೂಕ್ತ ಪುರಾವೆ ಒದಗಿಸಿಲ್ಲ ಎಂದು ಹೇಳಿರುವ ನ್ಯಾಯಾಧೀಶರು ಮಸ್ಕ್ಗೆ ಕ್ಲೀನ್ಚಿಟ್ ನೀಡಿದ್ದಾರೆ. ಈ ತೀರ್ಪನ್ನು ಮಸ್ಕ್ ಸ್ವಾಗತಿಸಿದ್ದರೆ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅರ್ಜಿದಾರರು ಹೇಳಿದ್ದಾರೆ.

Similar News