ಶಾರ್ಕ್ ದಾಳಿಯಲ್ಲಿ ಯುವತಿ ಮೃತ್ಯು

Update: 2023-02-04 17:14 GMT

ಸಿಡ್ನಿ, ಫೆ.4: ಡಾಲ್ಫಿನ್ ಗಳ ಜತೆ ಈಜಲು ನದಿಗೆ  ಜಿಗಿದ ಯುವತಿಯೊಬ್ಬಳು ಶಾರ್ಕ್ ಕಡಿತದಿಂದ ಮೃತಪಟ್ಟ ಘಟನೆ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ನಡೆದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಪರ್ತ್ ನಗರದ ಹೊರವಲಯದಲ್ಲಿನ ಸ್ವಾನ್ ನದಿಯಲ್ಲಿ ಸ್ಕೈಜೆಟ್ (ನೀರಿನ ಮೇಲೆ ಬೈಕ್ನಂತೆ ಚಲಿಸುವ ವಾಹನ)ನಲ್ಲಿ ಈ ಯುವತಿ ತನ್ನ ಗೆಳತಿಯರ ಜತೆ ವಿಹಾರ ನಡೆಸುತ್ತಿದ್ದಳು. ಆಗ ಡಾಲ್ಫಿನ್ ಗಳ ಹಿಂಡೊಂದು ಇವರ ಬಳಿ ಬಂದಿದ್ದು ಅವುಗಳ ಜತೆ ಈಜುವ ಹುಮ್ಮಸ್ಸಿನಲ್ಲಿ ಯುವತಿ ನೀರಿಗೆ ಜಿಗಿದಿದ್ದಾಳೆ. ಆಗ ಶಾರ್ಕ್ ಮೀನೊಂದು ಈಕೆಯ ಮೇಲೆ ದಾಳಿ ನಡೆಸಿದೆ.

ತಕ್ಷಣ ರಕ್ಷಣಾ ತಂಡ ನೆರವಿಗೆ ಧಾವಿಸಿ ಅವಳನ್ನು ಮೇಲೆತ್ತಿದರೂ ಆಕೆ ಅದಾಗಲೇ ಕೊನೆಯುಸಿರೆಳೆದಿದ್ದಳು ಎಂದು ಪೊಲೀಸ್ ಅಧಿಕಾರಿ ಪೌಲ್ ರಾಬಿನ್ಸನ್ ಹೇಳಿದ್ದಾರೆ.

Similar News