ಸ್ಟೇಡಿಯಂ ಬಳಿ ಸ್ಪೋಟ: ಸುರಕ್ಷಿತ ಸ್ಥಳಕ್ಕೆ ತೆರಳಿದ ಬಾಬರ್‌ ಅಝಂ, ಶಾಹಿದ್‌ ಅಫ್ರೀದಿ

Update: 2023-02-05 12:00 GMT

ಇಸ್ಲಾಮಾಬಾದ್: ಪಾಕ್‌ ಕ್ರಿಕೆಟ್‌ ತಂಡ ನಾಯಕ ಬಾಬರ್ ಅಝಂ, ಶಾಹಿದ್ ಅಫ್ರೀದಿ ಸೇರಿದಂತೆ ಪಾಕಿಸ್ತಾನದ ಕ್ರಿಕೆಟಿಗರು ಆಡುತ್ತಿದ್ದ ಸ್ಟೇಡಿಯಂ ಸಮೀಪದಲ್ಲೇ ಭಯೋತ್ಪಾದಕ ದಾಳಿ ನಡೆದಿದ್ದು, ಕ್ರಿಕೆಟಿಗರನ್ನು ಸ್ಥಳದಿಂದ  ಸುರಕ್ಷಿತ ಪ್ರದೇಶದೆಡೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

ಪೊಲೀಸ್ ಲೈನ್ಸ್ ಪ್ರದೇಶದಲ್ಲಿ ಸ್ಫೋಟವಾದ ಬಳಿಕ ನವಾಬ್ ಅಕ್ಬರ್ ಬುಗ್ತಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ನ ಪ್ರದರ್ಶನ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ. 

ಸ್ಪೋಟದ ತೀವ್ರತೆಗೆ ಐವರು ಗಾಯಗೊಂಡಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯ ಪೂರ್ಣಗೊಂಡಿದೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ಸ್ಫೋಟದಲ್ಲಿ ಭದ್ರತಾ ಅಧಿಕಾರಿಗಳನ್ನು ಗುರಿಯಾಗಿಸಲಾಗಿತ್ತು ಎಂದು ಅದು ಹೇಳಿದೆ.

Similar News