ಝಾಗ್ರೆಬ್ ಓಪನ್ ರ್ಯಾಂಕಿಂಗ್ ಸರಣಿ: ಕಂಚಿನ ಪದಕ ಗೆದ್ದ ಆಶು

Update: 2023-02-05 18:21 GMT

 ಝಾಗ್ರೆಬ್, ಫೆ.5: ಏಶ್ಯನ್ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತ ಆಶು ಝಾಗ್ರೆಬ್ ಓಪನ್ ರ್ಯಾಂಕಿಂಗ್ ಸರಣಿಯ ಮುಕ್ತಾಯದ ದಿನವಾದ ರವಿವಾರ ಗ್ರೀಕೊ ರೋಮನ್ ವಿಭಾಗದಲ್ಲಿ ಭಾರತಕ್ಕೆ 67 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದುಕೊಟ್ಟರು.

23ರ ವಯಸ್ಸಿನ ಕುಸ್ತಿಪಟು ಆಶು ಲಿಥುವೇನಿಯಾದ ಅಡೋಮಾಸ್ ಗ್ರಿಗಾಲಿಯು ನಾಸ್ ಅವರನ್ನು 5-0 ಅಂತರದಿಂದ ಸೋಲಿಸಿ ಭಾರತದ ಪದಕದ ಖಾತೆಗೆ ಎರಡನೇ ಕಂಚು ಸೇರಿಸಿದರು.

ಅಂಡರ್-23 ವಿಶ್ವ ಚಾಂಪಿಯನ್, ಫ್ರೀಸ್ಟೈಲ್ ಕುಸ್ತಿಪಟು ಅಮನ್ ಸೆಹ್ರಾವತ್ ಚಾಂಪಿಯನ್‌ಶಿಪ್‌ನ ಮೊದಲ ದಿನದಂದು ಪುರುಷರ 57 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿದ್ದರು.

ರಿಪಿಚೇಜ್ ಸುತ್ತಿನಲ್ಲಿ ಹಂಗೇರಿಯದ ಆಡಮ್ ಫೋಯ್ಲೆಕ್ ಅವರನ್ನು 8-0 ಅಂತರದಿಂದ ಸೋಲಿಸಿದ ಅಶು ನಾರ್ವೆಯ ಹಾವರ್ಡ್ ಜೋರ್ಗೆನ್ಸೆನ್ ಅವರನ್ನು 9-0 ಅಂತರದಿಂದ ಸೋಲಿಸಿ ಕಂಚಿನ ಪದಕ ಸುತ್ತಿಗೆ ತಲುಪಿದರು.

Similar News