ಟರ್ಕಿಯಲ್ಲಿ ಭೂಕಂಪನ ಹಿನ್ನೆಲೆ: ಇಟಲಿಯಲ್ಲಿ ಸುನಾಮಿ ಎಚ್ಚರಿಕೆ

Update: 2023-02-06 06:57 GMT

ಇಸ್ತಾಂಬುಲ್ : ಇಂದು ಮುಂಜಾನೆ ಟರ್ಕಿಯಲ್ಲಿ ಭಾರೀ ಭೂಕಂಪ ಸಂಭವಿಸಿದ ನಂತರ ಇಟಲಿ ಅಧಿಕಾರಿಗಳು ಸುನಾಮಿ ಎಚ್ಚರಿಕೆಯನ್ನು ನೀಡಿದ್ದಾರೆ.

ಕಡಲ ಕಿನಾರೆಯಿಂದ ದೂರವಿರಲು ಹಾಗೂ  ಸ್ಥಳೀಯ ಸರಕಾರಿ ಸಂಸ್ಥೆಗಳು ನೀಡುವ ಸೂಚನೆಗಳನ್ನು ಅನುಸರಿಸುವಂತೆ ಟ್ವೀಟ್‌ನಲ್ಲಿ, ಪ್ರಾಧಿಕಾರವು ನಿವಾಸಿಗಳಿಗೆ ತಿಳಿಸಿದೆ.

ದೇಶದ ದಕ್ಷಿಣ ಮತ್ತು ಉತ್ತರ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪದ ನಂತರ ಟರ್ಕಿಯಲ್ಲಿ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಲೆಬನಾನ್ ಮತ್ತು ಸಿರಿಯಾದಲ್ಲಿಯೂ ಕೂಡ ಭೂಕಂಪನದ ಅನುಭವವಾಗಿದ್ದು,ಗ್ರೀಸ್, ಜೋರ್ಡಾನ್, ಇರಾಕ್ ಹಾಗೂ ಬ್ರಿಟನ್  ಸೇರಿದಂತೆ ಇತರ ದೇಶಗಳ ಮೇಲೂ ಭೂಕಂಪನದ ಪರಿಣಾಮ ಬೀರಿದೆ.

Similar News