ಚೇತರಿಸಿಕೊಂಡ ಬಳಿಕ ರಿಶಭ್ ಪಂತ್ ಗೆ ಕಪಾಳ ಮೋಕ್ಷ ಮಾಡುವೆ ಎಂದ ಕಪಿಲ್ ದೇವ್!

Update: 2023-02-08 11:24 GMT

ಹೊಸದಿಲ್ಲಿ: ಭಾರತೀಯ ವಿಕೆಟ್ ಕೀಪರ್-ಬ್ಯಾಟರ್ ರಿಶಭ್ ಪಂತ್ ಡಿಸೆಂಬರ್ 30 ರಂದು ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ  ಗಂಭೀರ ಗಾಯಗೊಂಡ ನಂತರ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅಪಘಾತದ ನಂತರ ಪಂತ್ ಅವರ ಕಾರಿಗೆ ಬೆಂಕಿ ಹತ್ತಿಕೊಂಡಿತ್ತು ಹಾಗೂ  ಕ್ರಿಕೆಟಿಗ ಸಕಾಲದಲ್ಲಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದರು. ಸದ್ಯ ಚೇತರಿಕೆಯ ಹಾದಿಯಲ್ಲಿರುವ ಪಂತ್  ಕುರಿತು ಪ್ರತಿಕ್ರಿಯಿಸಿರುವ  ಭಾರತೀಯ ಕ್ರಿಕೆಟ್ ದಂತಕಥೆ ಕಪಿಲ್ ದೇವ್(Kapil Dev)  ಆ ಮಾರಣಾಂತಿಕ ಅಪಘಾತದಲ್ಲಿ ಉಂಟಾದ ಗಾಯಗಳಿಂದ ಚೇತರಿಸಿಕೊಂಡ ತಕ್ಷಣ ಪಂತ್‌ಗೆ ಕಪಾಳಮೋಕ್ಷ ಮಾಡಲು ಬಯಸುತ್ತೇನೆ ಎಂದು ಹೇಳಿದರು.

 ''ಪಂತ್ ಅನುಪಸ್ಥಿತಿಯು ಭಾರತ ಕ್ರಿಕೆಟ್ ತಂಡವನ್ನು ತಬ್ಬಿಬ್ಬುಗೊಳಿಸಿದೆ. ಮಕ್ಕಳು ತಪ್ಪು ಮಾಡಿದಾಗ ಕಪಾಳಮೋಕ್ಷ ಮಾಡುವ ಹಕ್ಕು ಪೋಷಕರಿಗೆ ಇರುವಂತೆಯೇ ಗಾಯದಿಂದ  ಚೇತರಿಸಿಕೊಂಡ ನಂತರ ಪಂತ್‌ಗೆ ನಾನು ಕಪಾಳ ಮೋಕ್ಷ ಮಾಡುವೆ'' ಎಂದು ಕಪಿಲ್ ಹೇಳಿದ್ದಾರೆ.

"ನನಗೆ ಅವನ ಮೇಲೆ ತುಂಬಾ ಪ್ರೀತಿ ಇದೆ, ಅವನು ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ, ಹಾಗಾಗಿ ನಾನು ಹೋಗಿ ಅವನಿಗೆ ಕಪಾಳಮೋಕ್ಷ ಮಾಡಿ ನಿನ್ನನ್ನು ಚೆನ್ನಾಗಿ ನೋಡಿಕೊ ಎಂದು ಹೇಳುತ್ತೇನೆ. ಕಾರು ಅಪಘಾತದಿಂದಾಗಿ ಇಡೀ ತಂಡವು ನಲುಗಿದೆ. ನಾನು ಅವನನ್ನು ಪ್ರೀತಿಸುತ್ತೇನೆ. ಆದರೆ ನನಗೂ ಕೂಡ ಅವನ ಮೇಲೆ ಕೋಪವಿದೆ. ಇಂದಿನ ಯುವಕರು ಯಾಕೆ ಇಂತಹ ತಪ್ಪುಗಳನ್ನು ಮಾಡುತ್ತಾರೆ?  ಇಂತಹ ತಪ್ಪು ಮಾಡಿರುವುದಕ್ಕೆ ಕಪಾಳಮೋಕ್ಷ ಮಾಡಬೇಕು'' ಎಂದರು.

Similar News