ಮೊದಲ ಟೆಸ್ಟ್ : ಭಾರತ ವಿರುದ್ಧ ಆಸ್ಟ್ರೇಲಿಯ 177 ರನ್ ಗೆ ಆಲೌಟ್
8 ವಿಕೆಟ್ ಕಬಳಿಸಿದ ಸ್ಪಿನ್ನರ್ ಗಳಾದ ರವೀಂದ್ರ ಜಡೇಜ, ಆರ್. ಅಶ್ವಿನ್
Update: 2023-02-09 14:54 IST
ನಾಗ್ಪುರ, ಫೆ.9: ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ನೇತೃತ್ವದ ಭಾರತದ ಬೌಲರ್ ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ ತಂಡ ಗುರುವಾರ ಆರಂಭವಾದ ಮೊದಲ ಟೆಸ್ಟ್ ನ ಮೊದಲ ದಿನದಾಟದಲ್ಲೇ 63.5 ಓವರ್ ಗಳಲ್ಲಿ ಕೇವಲ 177 ರನ್ ಗಳಿಸಿ ಆಲೌಟಾಗಿದೆ.
ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆದ 4 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ವೇಗಿಗಳಾದ ಮುಹಮ್ಮದ್ ಶಮಿ ಹಾಗೂ ಮುಹಮ್ಮದ್ ಸಿರಾಜ್ 2.1 ಓವರ್ ಗಳಲ್ಲಿ 21 ರನ್ ಗೆ ಆಸ್ಟ್ರೇಲಿಯದ ಆರಂಭಿಕ ಆಟಗಾರರನ್ನು ಪೆವಿಲಿಯನ್ ಗೆ ಕಳುಹಿಸಿದರು.
ಭಾರತದ ಯಶಸ್ವಿ ಬೌಲರ್ ಜಡೇಜ (5-47) ಆಸೀಸ್ ನ ಅಗ್ರ ಸ್ಕೋರರ್ ಲ್ಯಾಬುಶೇನ್ (49 ರನ್) ಹಾಗೂ ಮಾಜಿ ನಾಯಕ ಸ್ಟೀವ್ ಸ್ಮಿತ್(37 ರನ್)ಸಹಿತ ಪ್ರಮುಖ 5 ವಿಕೆಟ್ ಗಳನ್ನು ಪಡೆದರು. ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ (3-42)ಜಡೇಜಗೆ ಉತ್ತಮ ಸಾಥ್ ನೀಡಿದರು.
ಶಮಿ(1-18) ಹಾಗೂ ಸಿರಾಜ್(1-30) ತಲಾ ಒಂದು ವಿಕೆಟ್ ಪಡೆದರು.