40 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಸಾಧನವನ್ನು ಹೊಡೆದುರುಳಿಸಿದ ಅಮೆರಿಕ

Update: 2023-02-11 03:10 GMT

ವಾಷಿಂಗ್ಟನ್: ಅಲಸ್ಕಾ ನಗರದ ಮೇಲೆ ವಾಯುಪ್ರದೇಶದಲ್ಲಿ ಶುಕ್ರವಾರ 40 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ಗುರುತು ಪತ್ತೆಯಾಗದ ಸಾಧನವೊಂದನ್ನು ಅಮೆರಿಕದ ಯುದ್ಧವಿಮಾನಗಳು ಹೊಡೆದುರುಳಿಸಿವೆ ಎಂದು ಶ್ವೇತಭವನ ಪ್ರಕಟಿಸಿದೆ.

ಚೀನಾದ ಬೇಹುಗಾರಿಕೆ ಬಲೂನನ್ನು ಹೊಡೆದುರುಳಿಸಿದ ಆರೇ ದಿನಗಳಲ್ಲಿ ಮತ್ತೊಂದು ಇಂಥ ಘಟನೆ ನಡೆದಿರುವುದು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿದೆ.

ಈ ಹೊಸ ಸಾಧನದ ಮೂಲ ಅಥವಾ ಉದ್ದೇಶದ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ಇದು 40 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಕಾರಣ ನಾಗರಿಕ ವಿಮಾನಯಾನಕ್ಕೆ ಅಪಾಯ ತರುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಅದನ್ನು ಹೊಡೆದುರುಳಿಸಲಾಗಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬೆ ಹೇಳಿದರು.

"ಅಧ್ಯಕ್ಷರು ಈ ಸಾಧನವನ್ನು ಹೊಡೆದುರುಳಿಸಲು ಆದೇಶ ನೀಡಿದ್ದಾರೆ" ಎಂದು ಅವರು ಸ್ಪಷ್ಟಪಡಿಸಿದರು. ಇದನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ ಎಂದು ವಿವರಿಸಿದರು.

ಇತ್ತೀಚೆಗೆ ಅಮೆರಿಕದ ವಾಯುಪ್ರದೇಶದಲ್ಲಿ ಕಂಡುಬಂದ ಚೀನಾದ ಬಲೂನಿಗೆ ಹೋಲಿಸಿದರೆ ಇದು ತೀರಾ ಸಣ್ಣ ವಸ್ತು. ಅಟ್ಲಾಂಟಿಕ್ ಕಡಲ ತೀರದಲ್ಲಿ ಶನಿವಾರ ಇದನ್ನು ಹೊಡೆದುರುಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದು ಸಣ್ಣ ಕಾರಿನ ಗಾತ್ರದ್ದು ಎಂದರು.

Similar News