ಆಸ್ಟ್ರೇಲಿಯದ ಅಲೆಕ್ಸಾಂಡರ್ ರನ್ನು ಸೋಲಿಸಿ ಲೈಟ್ ವೇಟ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಇಸ್ಲಾಂ ಮಖಚೆವ್
UFC 284 ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆ
ಪರ್ತ್: ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಶನಿವಾರ ನಡೆದ UFC 284 ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಇಸ್ಲಾಂ ಮಖಚೆವ್ ಅವರು ಫೆದರ್‌ವೇಟ್ ಚಾಂಪಿಯನ್ ಅಲೆಕ್ಸಾಂಡರ್ ವೊಲ್ಕನೋವ್ಸ್ಕಿಯವರನ್ನು ಒಮ್ಮತದ ತೀರ್ಪಿನಲ್ಲಿ(48-47, 48-47, 49-46)ಸೋಲಿಸಿ ಲೈಟ್ ವೇಟ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಈ ಫಲಿತಾಂಶವು ಇನ್ನು ಕೆಲವು ಸಮಯ ಚರ್ಚೆಯಲ್ಲಿ ಇರುವುದು ನಿಶ್ಚಿತವಾಗಿದೆ.
ನಿಕಟ ಸ್ಪರ್ಧೆಯಲ್ಲಿ, ರಶ್ಯದ ಮಖಚೆವ್ ಕೌಂಟರ್ ಸ್ಟ್ರೈಕಿಂಗ್ ಹಾಗೂ ಆಕ್ರಮಣಕಾರಿ ಹೋರಾಟದ ಮೂಲಕ ಆಸ್ಟ್ರೇಲಿಯದ ವೊಲ್ಕಾನೋವ್ಸ್ಕಿಯ ವಿರುದ್ಧ ಮೇಲುಗೈ ಸಾಧಿಸಿದರು.
ಏತನ್ಮಧ್ಯೆ, ಮಖಚೆವ್ ಅಕ್ಟೋಬರ್‌ನಲ್ಲಿ UFC 280 ನಲ್ಲಿ ಚಾರ್ಲ್ಸ್ ಒಲಿವೇರಾ ಅವರನ್ನು ಸೋಲಿಸಿದ ನಂತರ ಮೊದಲ ಬಾರಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡರು.
ಮಖಚೇವ್ ತನ್ನ ಕೋಚ್, ಮೆಂಟರ್ ಹಾಗೂ ಮಾಜಿ UFC ಲೈಟ್‌ವೇಟ್ ಚಾಂಪಿಯನ್ ಖಬೀಬ್ ನೂರ್ ಮೊಹಮದೊವ್ ಅವರ ಮಾರ್ಗದರ್ಶನವಿಲ್ಲದೆ ಹೋರಾಡಿದರು. ಖಬೀಬ್ ಅವರು ತನ್ನ ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ ಜನವರಿಯಲ್ಲಿ ಕೋಚಿಂಗ್ ವೃತ್ತಿಗೆ ವಿದಾಯ ಹೇಳಿದ್ದಾರೆ.