×
Ad

ಮಹಿಳಾ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜು: 3.4 ಕೋ.ರೂ.ಗೆ ಆರ್ ಸಿಬಿ ಪಾಲಾದ ಸ್ಮೃತಿ ಮಂಧಾನ

Update: 2023-02-13 14:57 IST

ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ (WPL) ನ ಮೊದಲ  ಆವೃತ್ತಿಯ ಹರಾಜು ಪ್ರಕ್ರಿಯೆ ಸೋಮವಾರ ಮಧ್ಯಾಹ್ನ ಮುಂಬೈನಲ್ಲಿ ಆರಂಭವಾಗಿದೆ.

ಮೊದಲ ಸೆಟ್‌ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ     RCBಗೆ 3.4 ಕೋಟಿ ರೂ. ಹರಾಜಾಗಿ  ಅತ್ಯಂತ ದುಬಾರಿ ಆಟಗಾರ್ತಿ ಎನಿಸಿಕೊಂಡರು. ಆಶ್ಲೀಗ್ ಗಾರ್ಡ್ನರ್ ಗುಜರಾತ್ ಜೈಂಟ್ಸ್‌ಗೆ 3.2 ಕೋಟಿ ರೂ. ಹರಾಜಾಗುವ ಮೂಲಕ ಎರಡನೇ ಅತ್ಯಂತ ದುಬಾರಿ ಆಟಗಾರ್ತಿ ಎನಿಸಿಕೊಂಡರು.

50 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ 1.8 ಕೋರೂ.ಗೆ ಮುಂಬೈ ಇಂಡಿಯನ್ಸ್ ಪಾಲಾದರು.

ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್ ಗೆ ಆಟಗಾರ್ತಿಯರ ಹರಾಜಿಗೆ ಒಟ್ಟು 1,525 ಆಟಗಾರ್ತಿಯರು ನೋಂದಾಯಿಸಿಕೊಂಡಿದ್ದಾರೆ.

246 ಭಾರತೀಯರು ಹಾಗೂ  163 ಸಾಗರೋತ್ತರ ಆಟಗಾರ್ತಿಯರಿದ್ದು, ಅಸೋಸಿಯೇಟ್ ರಾಷ್ಟ್ರದ 8 ಆಟಗಾರ್ತಿಯರು ಸೇರಿದಂತೆ ಹರಾಜಿನಲ್ಲಿ ಸುಮಾರು 409 ಆಟಗಾರ್ತಿಯರು  ಪಾಲ್ಗೊಳ್ಳಲಿದ್ದಾರೆ.

ಐದು ತಂಡಗಳಲ್ಲಿ ಗರಿಷ್ಠ 90 ಸ್ಲಾಟ್‌ಗಳು ಲಭ್ಯವಿದ್ದು, 30 ವಿದೇಶಿ ಆಟಗಾರರಿಗಾಗಿ ಅವಕಾಶ ನೀಡಲಾಗಿದೆ.

ಹರಾಜಾದ ಆಟಗಾರ್ತಿಯರು

ಸ್ಮೃತಿ ಮಂಧಾನ - 3.4 ಕೋಟಿ ರೂ.(ಆರ್‌ಸಿಬಿ)

ಆಶ್ಲೀ ಗಾರ್ಡ್ನರ್ - 3.2 ಕೋಟಿ ರೂ. (ಗುಜರಾತ್ ಜೈಂಟ್ಸ್)

ಹರ್ಮನ್‌ಪ್ರೀತ್ ಕೌರ್ - 1.8 ಕೋಟಿ ರೂ. (ಮುಂಬೈ ಇಂಡಿಯನ್ಸ್)

ಸೋಫಿ ಎಕ್ಲೆಸ್ಟೋನ್ - 1.8 ಕೋಟಿ ರೂ. (UPW)

ಎಲ್ಲಿಸ್ ಪೆರ್ರಿ - 1.7 ಕೋಟಿ ರೂ.(RCB)

ಸೋಫಿ ಡಿವೈನ್ - 50 ಲಕ್ಷ ರೂ. (RCB)

Similar News