×
Ad

ಕೋವಿಡ್‌ ಸಾಂಕ್ರಾಮಿಕದ ನಂತರ ದೇಶದಲ್ಲಿ ಕ್ಯಾನ್ಸರ್‌ ಪ್ರಕರಣಗಳಲ್ಲಿ ಏರಿಕೆ: ರಾಮದೇವ್‌

Update: 2023-02-18 16:13 IST

ಹೊಸದಿಲ್ಲಿ: ಕೋವಿಡ್-‌19 ಸಾಂಕ್ರಾಮಿಕದ ನಂತರ ದೇಶದಲ್ಲಿ ಕ್ಯಾನ್ಸರ್‌ ಪ್ರಕರಣಗಳಲ್ಲಿ ಏರಿಕೆಯಾಗಿದೆ ಎಂದು ಯೋಗ ಗುರು ರಾಮದೇವ್‌ (Ramdev) ಹೇಳಿದ್ದಾರೆ.

ಗೋವಾದ ಮಿರಮರ್‌ ಬೀಚಿನಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ನಡೆಯುವ ಮೂರು ದಿನಗಳ ಯೋಗ ಶಿಬಿರದಂಗವಾಗಿ ಇಂದು ಬೆಳಿಗ್ಗೆ ಅವರು ಮಾತನಾಡುತ್ತಿದ್ದರು.

"ಕ್ಯಾನ್ಸರ್‌ ಪ್ರಕರಣಗಳು ಬಹಳಷ್ಟು ಹೆಚ್ಚಾಗಿವೆ. ಕೋವಿಡ್‌ ಸಾಂಕ್ರಾಮಿಕದ ನಂತರ ಇನ್ನಷ್ಟು ಹೆಚ್ಚಾಗಿದೆ. ಜನರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ, ಶ್ರವಣ ಸಮಸ್ಯೆ ಎದುರಿಸುತ್ತಿದ್ದಾರೆ," ಎಂದು ಅವರು ಹೇಳಿದರು.

"ಭಾರತವು ಜಾಗತಿಕ ವೆಲ್ನೆಸ್‌ ಸೆಂಟರ್‌ ಆಗಬೇಕೆಂಬುದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಗೋವಾ ಕೂಡ ಒಂದು ಸೆಂಟರ್‌ ಆಫ್‌ ವೆಲ್ನೆಸ್‌ ಆಗಬೇಕೆಂಬುದು ನನ್ನ ಕನಸಾಗಿದೆ," ಎಂದು ರಾಮದೇವ್‌ ಹೇಳಿದರು.

ಪ್ರವಾಸಿಗರು ಗೋವಾಗೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಮಾತ್ರವಲ್ಲದೆ, ರಕ್ತದೊತ್ತಡ, ಮಧುಮೇಹ, ಥೈರಾಯ್ಡ್‌, ಕ್ಯಾನ್ಸರ್‌ ಮತ್ತಿತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಆಗಮಿಸಬೇಕು, ಗೋವಾ ರಾಜ್ಯವು ಯೋಗ, ಆಯುರ್ವೇದ, ಸನಾತನ ಮತ್ತು ಆಧ್ಯಾತ್ಮಿಕತೆಯ ಪ್ರವಾಸೋದ್ಯಮ ತಾಣವಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ: ಆರೆಸ್ಸೆಸ್‌ ಜೊತೆ ಸಭೆ ನಡೆಸಿದ ಜಮಾಅತೆ ಇಸ್ಲಾಮಿ ಸಂಘಟನೆಯ ಮುಖಂಡರು: ವ್ಯಾಪಕ ಟೀಕೆ

Similar News