ದ್ವಿತೀಯ ಟೆಸ್ಟ್: ರವೀಂದ್ರ ಜಡೇಜ , ಅಶ್ವಿನ್ ಅಮೋಘ ಬೌಲಿಂಗ್, ಆಸ್ಟ್ರೇಲಿಯ 113 ರನ್ ಗೆ ಆಲೌಟ್

ರೋಹಿತ್ ಬಳಗಕ್ಕೆ 115 ರನ್ ಗುರಿ

Update: 2023-02-19 05:51 GMT

ಹೊಸದಿಲ್ಲಿ: ಸ್ಪಿನ್ನರ್ ಗಳಾದ ರವೀಂದ್ರ ಜಡೇಜ (7-42) ಹಾಗೂ ಆರ್. ಅಶ್ವಿನ್( 3-59) ಅಮೋಘ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ ತಂಡ ಭಾರತಕ್ಕೆ ದ್ವಿತೀಯ ಟೆಸ್ಟ್ ಪಂದ್ಯದ ಗೆಲುವಿಗೆ  115 ರನ್ ಗುರಿ ನೀಡಿದೆ.

3ನೇ ದಿನದಾಟವಾದ ರವಿವಾರ ಔಟಾಗದೆ 61 ರನ್ ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ ತಂಡ 31.1 ಓವರ್ ಗಳಲ್ಲಿ 113 ರನ್ ಗೆ ಆಲೌಟಾಯಿತು. ಮೊದಲ ಇನಿಂಗ್ಸ್ ನಲ್ಲಿ 1 ರನ್ ಮುನ್ನಡೆ ಪಡೆದಿದ್ದ ಆಸ್ಟ್ರೇಲಿಯವು  ಭಾರತಕ್ಕೆ 115 ರನ್ ಗುರಿ ನೀಡಿತು.

ಆಸ್ಟ್ರೇಲಿಯದ ಪರ ಟ್ರಾವಿಸ್ ಹೆಡ್(43 ರನ್, 46 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಲ್ಯಾಬುಶೇನ್(35) ಎರಡಂಕೆಯ ಸ್ಕೋರ್ ಗಳಿಸಿದರು. ಸ್ಟೀವ್ ಸ್ಮಿತ್ ಸಹಿತ ಉಳಿದ ಆಟಗಾರರು ವಿಫಲರಾದರು.

ಆಸ್ಟ್ರೇಲಿಯ ಕೇವಲ 53 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ ಗಳನ್ನು ಕಳೆದುಕೊಂಡಿತು.

Similar News