×
Ad

ಹತ್ಯೆ ಘಟನೆ ವರದಿಗೆ ತೆರಳಿದ್ದ ಟಿವಿ ಪತ್ರಕರ್ತನ ಗುಂಡಿಟ್ಟು ಹತ್ಯೆ!

Update: 2023-02-23 08:23 IST

ಫ್ಲೋರಿಡಾ: ಗುಂಡಿನ ದಾಳಿ ನಡೆದ ಪ್ರಕರಣವನ್ನು ವರದಿ ಮಾಡಲು ತೆರಳಿದ್ದ ಟಿವಿ ಪತ್ರಕರ್ತ ಹಾಗೂ ಪುಟ್ಟ ಬಾಲಕಿಯೊಬ್ಬಳನ್ನು ಗುಂಡು ಹೊಡೆದು ಸಾಯಿಸಿದ ಪ್ರಕರಣ ವರದಿಯಾಗಿದೆ. ಈ ಸಂಬಂಧ ಕೀತ್ ಮೆಲ್ವಿನ್ ಮೊಸಿಸ್ (19) ಎಂಬಾತನನ್ನು ಬಂಧಿಸಲಾಗಿದೆ. ಓರ್ಲಾಂಡೊ ಪ್ರದೇಶದಲ್ಲಿ ಈತ ಗುಂಡಿನ ದಾಳಿ ನಡೆಸಿದ್ದಾಗಿ ಶಂಕಿಸಲಾಗಿದೆ.

ಹತ್ಯೆಗೀಡಾದ ಪತ್ರಕರ್ತ ಸ್ಪೆಕ್ಟ್ರಂ ನ್ಯೂಸ್ 13 ಚಾನಲ್‌ಗೆ ಕೆಲಸ ಮಾಡುತ್ತಿದ್ದರು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಪತ್ರಕರ್ತನ ಜತೆಗೆ 9 ವರ್ಷದ ಬಾಲಕಿ ಕೂಡಾ ಹತ್ಯೆಗೀಡಾಗಿದ್ದಾಲೆ. ಟಿವಿ ಕ್ಯಾಮರಾಮನ್ ಹಾಗೂ ಬಾಲಕಿಯ ತಾಯಿ ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ.

ಈ ಗುಂಡಿನ ದಾಳಿಯ ಉದ್ದೇಶ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಶಂಕಿತ ದಾಳಿಕೋರನನ್ನು ಶಸ್ತ್ರ ಸಹಿತ ಬಂಧಿಸಲಾಗಿದೆ. ಈತ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.

Similar News