ಅಮೆರಿಕಾದ ಖ್ಯಾತ ಹೂಡಿಕೆದಾರ, ಉದ್ಯಮಿ ಥಾಮಸ್‌ ಲೀ ಆತ್ಮಹತ್ಯೆ

Update: 2023-02-25 10:44 GMT

ನ್ಯೂಯಾರ್ಕ್‌ : ಅಮೆರಿಕಾದ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾಗಿದ್ದ  ಉದ್ಯಮಿ ಹಾಗೂ ಖಾಸಗಿ ಈಕ್ವಿಟಿ ಬಂಡವಾಳದಲ್ಲಿ ಮುಂಚೂಣಿಯ್ಲಲಿದ್ದ ಥಾಮಸ್‌ ಲೀ ತಮ್ಮ ಮ್ಯಾನ್‌ಹಾಟನ್‌ ಕಚೇರಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದ್ದು ಅವರು ಆತ್ಮಹತ್ಯೆಗೈದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಥಾಮಸ್‌ ಲೀ ಅವರ ಫಿಫ್ತ್‌ ಅವೆನ್ಯೂ ಮ್ಯಾನ್‌ಹಾಟನ್‌ ಕಚೇರಿ ಅವರ ಹೂಡಿಕೆ ಸಂಸ್ಥೆಯ ಮುಖ್ಯ ಕಾರ್ಯಾಲಯವಾಗಿದೆ. ಗುರುವಾರ ಮುಂಜಾನೆ 11.10 ಗಂಟೆಗೆ ಪೊಲೀಸರು ಕರೆಯೊಂದನ್ನಾಧರಿಸಿ ಅವರ ಕಚೇರಿಗೆ ತೆರಳಿದಾಗ ಅವರು ಸ್ವಯಂ ಗುಂಡು ಹಾರಿಸಿ ಆತ್ಮಹತ್ಯೆಗೈದಿರುವುದು ತಿಳಿದು ಬಂದಿತ್ತು.

ಅವರ ಕಚೇರಿಯ ಬಾತ್‌ರೂಂ ನೆಲದಲ್ಲಿ ಅವರನ್ನು ಅವರ ಸಹಾಯಕಿಯೊಬ್ಬರು ನೋಡಿದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಗುರುವಾರ ಬೆಳಗ್ಗಿನಿಂದ ಥಾಮಸ್‌ ಲೀ ಯಾರ ಕಣ್ಣಿಗೂ ಬಿದ್ದಿರಲಿಲ್ಲ.

ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಥಾಮಸ್‌ ಲೀ ಅವರು ಲೀ ಈಕ್ವಿಟಿ ಸಂಸ್ಥೆಯ ಸ್ಥಾಪಕರು ಮತ್ತು ಅಧ್ಯಕ್ಷರಾಗಿದ್ದರು.

ಕಳೆದ 46 ವರ್ಷಗಳಲ್ಲಿ ಅವರು  ನೂರಾರು ಒಪ್ಪಂದಗಳಲ್ಲಿ 15 ಬಿಲಿಯನ್‌ ಡಾಲರ್‌ಗೂ ಅಧಿಕ ಹೂಡಿಕೆ ಮಾಡಿದ್ದರು.  ವಾರ್ನರ್‌ ಮ್ಯುಸಿಕ್‌ ಮತ್ತು ಸ್ನ್ಯಾಪಲ್‌ ಬೆವರೇಜಸ್‌ ನಂತಹ ಖ್ಯಾತ ಬ್ರ್ಯಾಂಡ್‌ಗಳ ಖರೀದಿ ಹಾಗೂ ನಂತರ ಮಾರಾಟವನ್ನೂ ಲೀ ಮಾಡಿದ್ದರು.

ಇದನ್ನೂ ಓದಿ: ಮದುವೆ ವೇಳೆ ಹೃದಯಾಘಾತದಿಂದ ಮೃತಪಟ್ಟ ವಧು: ಬದಲಿಗೆ ಕಿರಿಯ ಸಹೋದರಿಯನ್ನು ವಧುವಾಗಿಸಿದ ಕುಟುಂಬಸ್ಥರು

Similar News