×
Ad

ದುಬೈ ಟೆನಿಸ್ ಚಾಂಪಿಯನ್‌ ಶಿಪ್‌ ಗೆ ಆ್ಯಂಡಿ ಮರ್ರೆ ಅಲಭ್ಯ

Update: 2023-02-27 23:16 IST

ದುಬೈ, ಫೆ. 27:ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಬ್ರಿಟನ್ ಟೆನಿಸ್ ಸ್ಟಾರ್ ಆ್ಯಂಡಿ ಮರ್ರೆ ಈ ವಾರ ನಡೆಯಲಿರುವ ದುಬೈ ಟೆನಿಸ್ ಚಾಂಪಿಯನ್‌ಶಿಪ್‌ಗೆ ಲಭ್ಯವಿರುವುದಿಲ್ಲ ಎಂದು ಟೂರ್ನಮೆಂಟ್‌ನ ಆಯೋಜಕರು ಸೋಮವಾರ ಪ್ರಕಟಿಸಿದರು.

ಮೂರು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಮರ್ರೆಯನ್ನು ಕಾಡುತ್ತಿರುವ ಸೊಂಟದ ನೋವು ಅವರಿಗೆ ಹೊಸತೇನಲ್ಲ. 2018ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮರ್ರೆ 2019ರಲ್ಲಿ ನಿವೃತ್ತಿಯಾಗುವ ಚಿಂತನೆ ನಡೆಸಿದ್ದರು. ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮರ್ರೆ ಮೊದಲಿನ ಲಯಕ್ಕೆ ಮರಳಿದ್ದು ಕಳೆದ ವಾರ ಖತರ್ ಓಪನ್‌ನಲ್ಲಿ ಆಡಿದ್ದರು. ನಾಲ್ಕನೇ ಬಾರಿ ಎಟಿಪಿ ಫೈನಲ್‌ಗೆ ತಲುಪಿದ್ದ ಅವರು ರಶ್ಯದ ಡೇನಿಯಲ್ ಮಡ್ವೆಡೆವ್‌ಗೆ ಸೋತಿದ್ದರು.

ಈ ವರ್ಷದ ಟೂರ್ನಮೆಂಟ್‌ನಲ್ಲಿ ಆ್ಯಂಡಿ ಮರ್ರೆಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲು ಬೇಸರವಾಗುತ್ತಿದೆ. ಆ್ಯಂಡಿ ಸೊಂಟದ ನೋವಿನಿಂದ ಚೇತರಿಸಿ ಕೊಳ್ಳುತ್ತಿದ್ದು, ದುರದೃಷ್ಟವಶಾತ್ ದುಬೈ ಓಪನ್‌ನಿಂದ ಹೊರಗುಳಿದಿದ್ದಾರೆ ಎಂದು ದುಬೈ ಟೂರ್ನಿಯ ಆಯೋಜಕರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

Similar News