ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್‌ನ ವಿಶೇಷ ತಂಡದಲ್ಲಿ ರಿಚಾ ಘೋಷ್‌ಗೆ ಸ್ಥಾನ

Update: 2023-02-27 17:52 GMT

ಹೊಸದಿಲ್ಲಿ, ಫೆ.27: ಐಸಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ವಿಶೇಷ ತಂಡದಲ್ಲಿ ಆಸ್ಟ್ರೇಲಿಯದ ನಾಲ್ವರು ಆಟಗಾರ್ತಿಯರನ್ನು ಆಯ್ಕೆ ಮಾಡಲಾಗಿದ್ದು, ಭಾರತ ತಂಡದಿಂದ ರಿಚಾ ಘೋಷ್ ಮಾತ್ರ ಸ್ಥಾನ ಪಡೆದಿದ್ದಾರೆ.

‘ಸರಣಿಶ್ರೇಷ್ಠ’ ಪ್ರಶಸ್ತಿ ವಿಜೇತರಾಗಿರುವ ಅಶ್ಲೆ ಗಾರ್ಡನರ್‌ರೊಂದಿಗೆ ಅಲಿಸಾ ಹೀಲಿ, ಡಾರ್ಸಿ ಬ್ರೌನ್ ಹಾಗೂ ಮೆಗಾನ್ ಶುಟ್ ಅವರಿದ್ದಾರೆ. ಇಂಗ್ಲೆಂಡ್‌ನ ನ್ಯಾಟ್ ಸಿವೆರ್-ಬ್ರಂಟ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವೀಕ್ಷಕವಿವರಣೆಗಾರ ಇಯಾನ್ ಬಿಶಪ್ ಅವರನ್ನೊಳಗೊಂಡ ತಜ್ಞರ ಸಮಿತಿಯು ತಂಡವನ್ನು ಆಯ್ಕೆ ಮಾಡಿದೆ. ಸತತ ಎರಡು ಅರ್ಧಶತಕ ಸಿಡಿಸಿ ದಕ್ಷಿಣ ಆಫ್ರಿಕಾ ಫೈನಲ್ ತಲುಪಲು ಕಾರಣರಾಗಿದ್ದ ತಝಿಮ್ ಬ್ರಿಟ್ಸ್ ಓಪನರ್ ಆಗಿ ಆಯ್ಕೆಯಾಗಿದ್ದಾರೆ.

Similar News