ಬಾಹ್ಯಾಕಾಶ ನೌಕೆಯಿಂದ ವಿಶ್ವವನ್ನುದ್ದೇಶಿಸಿ ಮಾತನಾಡಿದ ಯುಎಇ ಗಗನಯಾತ್ರಿ

Update: 2023-03-02 17:48 GMT

ನ್ಯೂಯಾರ್ಕ್, ಮಾ.2: ಎಲಾನ್ ಮಸ್ಕ್ ಅವರ ರಾಕೆಟ್ ಕಂಪೆನಿ ಸ್ಪೇಸ್ಎಕ್ಸ್ ಗುರುವಾರ ಅಂತರಿಕ್ಷ ಬಾಹ್ಯಾಕಾಶ ನಿಲ್ದಾಣಕ್ಕೆ ರವಾನಿಸಿದ ಬಾಹ್ಯಾಕಾಶ ನೌಕೆಯಲ್ಲಿದ್ದ 4 ಗಗನಯಾತ್ರಿಗಳಲ್ಲಿ ಒಬ್ಬರಾಗಿರುವ ಯುಎಇಯ ಸುಲ್ತಾನ್ ಅಲ್ನೆಯಾದಿ ಅರೆಬಿಕ್ ಭಾಷೆಯಲ್ಲಿ ವಿಶ್ವವನ್ನುದ್ದೇಶಿಸಿ ಮಾತನಾಡಿ ತನಗೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

`ಅಸ್ಸಲಾಮು ಅಲೈಕುಂ' ಎಂದು ಮಾತು ಆರಂಭಿಸಿದ ಅಲ್ನೆಯಾದಿ, ನನ್ನ ಪೋಷಕರು,  ಕುಟುಂಬ, ಆಡಳಿತ ಮತ್ತು ಮುಹಮ್ಮದ್ ಬಿನ್ ರಷೀದ್ ಬಾಹ್ಯಾಕಾಶ ಕೇಂದ್ರಕ್ಕೆ ಧನ್ಯವಾದಗಳು. ನಮಗೆ ತರಬೇತಿ ನೀಡಿ ನಮ್ಮನ್ನು ಸಜ್ಜುಗೊಳಿಸಿದ ಎಲ್ಲರಿಗೂ ಧನ್ಯವಾದಗಳು. ನಾಸಾ ಮತ್ತು ಸ್ಪೇಸ್ಎಕ್ಸ್ ಗೆ ಕೂಡಾ ಧನ್ಯವಾದಗಳು' ಎಂದು ಹೇಳಿದ್ದಾರೆ.  

ಸುಲ್ತಾನ್ ಅಲ್ನೆಯಾದಿ ಯುಎಇಯ ಮಿಲಿಟರಿಯಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದರು.  ಬಾಹ್ಯಾಕಾಶ ನಿಲ್ದಾಣದಲ್ಲಿ 6 ತಿಂಗಳು ಕಳೆಯಲಿರುವ ಅವರು, ಚಂದ್ರ ಮತ್ತು ಮಂಗಳಗ್ರಹಕ್ಕೆ ಭವಿಷ್ಯದ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ, ಮಾನವ ದೇಹದ ಮೇಲೆ ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಣಾಮಗಳನ್ನು ಅಧ್ಯಯನ ನಡೆಸಲಿದ್ದಾರೆ.

Similar News