×
Ad

ಮಾ.6ರಂದು ಬ್ರಿಟನ್ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಭಾಷಣ

Update: 2023-03-04 11:53 IST

ಲಂಡನ್: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ 10 ದಿನಗಳ ಪ್ರವಾಸಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ್ದಾರೆ. ವಯನಾಡ್ ಸಂಸದ ಮೂರು ದಿನಗಳ ಕಾಲ ಲಂಡನ್‌ನಲ್ಲಿರಲಿದ್ದು, ಅಲ್ಲಿ ಅವರು ಬ್ರಿಟಿಷ್ ಸಂಸತ್ತಿನಲ್ಲಿ ಮಾತನಾಡಲಿದ್ದಾರೆ, ಅನಿವಾಸಿ ಭಾರತೀಯರನ್ನು ಭೇಟಿಯಾಗಲಿದ್ದಾರೆ, ಭಾರತೀಯ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಖಾಸಗಿ ವ್ಯಾಪಾರ ಸಭೆಗಳನ್ನು ನಡೆಸಲಿದ್ದಾರೆ ಮತ್ತು ಲಂಡನ್‌ನ ಪ್ರಸಿದ್ಧ ಚಿಂತಕರ ಚಾವಡಿ ಚಾಥಮ್ ಹೌಸ್ ನಲ್ಲಿ  ಭಾಷಣ ಮಾಡಲಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಅವರು ಮಾರ್ಚ್ 4 ರಿಂದ6 ರವರೆಗೆ ಲಂಡನ್‌ನಲ್ಲಿದ್ದಾರೆ. ರಾಹುಲ್ ಗಾಂಧಿಗೆ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಸಾಥ್ ನೀಡಲಿದ್ದಾರೆ.

ಮಾರ್ಚ್ 6 ರಂದು ವೆಸ್ಟ್‌ಮಿನಿಸ್ಟರ್ ಅರಮನೆಯ ಗ್ರ್ಯಾಂಡ್ ಕಮಿಟಿ ಕೊಠಡಿಯಲ್ಲಿ ರಾಹುಲ್ ಗಾಂಧಿ ಬ್ರಿಟನ್  ಸಂಸದರು, ಲಾರ್ಡ್ಸ್, ಬ್ಯಾರನೆಸ್‌ಗಳು ಮತ್ತು ಇತರ ಪಾಲ್ಗೊಳ್ಳುವವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂಡೋ-ಬ್ರಿಟಿಷ್ ಎಪಿಪಿಜಿ ಅಧ್ಯಕ್ಷ, ಭಾರತೀಯ ಮೂಲದ ಸಂಸದ ವೀರೇಂದ್ರ ಶರ್ಮಾ ಸಂಸತ್ತಿನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ

Similar News