×
Ad

ನಾಲ್ಕನೇ ಟೆಸ್ಟ್: ಭಾರತ ವಿರುದ್ಧ ಆಸ್ಟ್ರೇಲಿಯ 255/4

ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ ಆಕರ್ಷಕ ಶತಕ

Update: 2023-03-09 16:52 IST

ಅಹಮದಾಬಾದ್, ಮಾ.9: ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ ಸಿಡಿಸಿದ ಆಕರ್ಷಕ ಶತಕದ(ಔಟಾಗದೆ 104 ರನ್, 251 ಎಸೆತ, 15 ಬೌಂಡರಿ)ನೆರವಿನಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಭಾರತ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ 4 ವಿಕೆಟ್ ನಷ್ಟಕ್ಕೆ 255 ರನ್ ಕಲೆ ಹಾಕಿದೆ.

ಗುರುವಾರ ಟಾಸ್ ಜಯಿಸಿದ ಆಸ್ಟ್ರೇಲಿಯ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಟ್ರಾವಿಸ್ ಹೆಡ್(32 ರನ್)ಹಾಗೂ ಖ್ವಾಜಾ ಮೊದಲ ವಿಕೆಟಿಗೆ 61 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಈ ಜೋಡಿಯನ್ನು ಭಾರತದ ಸ್ಪಿನ್ನರ್ ಆರ್.ಅಶ್ವಿನ್ ಬೇರ್ಪಡಿಸಿದರು.

ಲ್ಯಾಬುಶೇನ್(3) ಹಾಗೂ ಪೀಟರ್ ಹ್ಯಾಂಡ್ಸ್‌ಕಾಂಬ್(17 ರನ್) ದೊಡ್ಡ ಮೊತ್ತ ಗಳಿಸಲು ವಿಫಲರಾದರು.
ತಂಡವನ್ನು ಆಧರಿಸಿದ ಖ್ವಾಜಾ ನಾಯಕ ಸ್ಟೀವನ್ ಸ್ಮಿತ್(38 ರನ್)ಜೊತೆ 3ನೇ ವಿಕೆಟಿಗೆ 79 ರನ್ ಸೇರಿಸಿದರು. ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್(ಔಟಾಗದೆ 49, 64 ಎಸೆತ)ಜೊತೆಗೆ 5ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 85 ರನ್ ಜೊತೆಯಾಟದಲ್ಲಿ ಭಾಗಿಯಾದ ಖ್ವಾಜಾ ಆಸ್ಟ್ರೇಲಿಯವು ಮೊದಲ ದಿನದಾಟದಂತ್ಯಕ್ಕೆ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.

ಖ್ವಾಜಾ 90ನೇ ಓವರ್‌ನಲ್ಲಿ ಶಮಿ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸುವ ಮೂಲಕ 246 ಎಸೆತಗಳಲ್ಲಿ 14ನೇ ಶತಕ ಪೂರೈಸಿದರು.

ಭಾರತದ ಪರ ಮುಹಮ್ಮದ್ ಶಮಿ(2-65)ಎರಡು ವಿಕೆಟ್ ಪಡೆದರು. ಆರ್.ಅಶ್ವಿನ್(1-57) ಹಾಗೂ ರವೀಂದ್ರ ಜಡೇಜ(1-49)ತಲಾ ಒಂದು ವಿಕೆಟ್‌ಗಳನ್ನು ಪಡೆದರು.
 

Similar News