×
Ad

ಕೋವಿಡ್ ಈ ವರ್ಷ ಜ್ವರವಾಗಿ ಉಲ್ಬಣಿಸಬಹುದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Update: 2023-03-17 21:22 IST

ಜಿನೆವ, ಮಾ.17: ಕೋವಿಡ್-19 ಸಾಂಕ್ರಾಮಿಕವು ಈ ವರ್ಷ ಫ್ಲೂ(ಜ್ವರ)ದ ರೂಪ ಪಡೆದು ಮನುಕುಲಕ್ಕೆ ಬೆದರಿಕೆ ಒಡ್ಡುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯಸಂಸ್ಥೆ ಎಚ್ಚರಿಕೆ ನೀಡಿದೆ.

ಕೋವಿಡ್ ಸೋಂಕಿನ ಸಾಂಕ್ರಾಮಿಕ ಹಂತ ಅಂತ್ಯಗೊಂಡಿರುವ ಬಗ್ಗೆ ಭರವಸೆಯಿದ್ದು, ಕೋವಿಡ್ ಸಾಂಕ್ರಾಮಿಕದ ತುರ್ತುಪರಿಸ್ಥಿತಿ ಅಂತ್ಯಗೊಂಡಿರುವ ಬಗ್ಗೆ  ಈ ವರ್ಷವೇ ಘೋಷಣೆ ಹೊರಡಿಸುವ ವಿಶ್ವಾಸವಿದೆ ಎಂದು ವಿಶ್ವ ಆರೋಗ್ಯಸಂಸ್ಥೆ ಹೇಳಿದೆ.

ಇದೀಗ ಕೋವಿಡ್-19 ಸೋಂಕನ್ನೂ ಸಾಮಾನ್ಯ ಜ್ವರದ ರೀತಿಯಲ್ಲಿ(ಆರೋಗ್ಯಕ್ಕೆ ಬೆದರಿಕೆ, ಕೊಲ್ಲುವುದನ್ನು ಮುಂದುವರಿಸುವ, ಆದರೆ ಸಮಾಜವನ್ನು ಅಡ್ಡಿಪಡಿಸದ ವೈರಸ್)  ಪರಿಗಣಿಸುವ ಹಂತವನ್ನು ನಾವು ತಲುಪಿರುವುದಾಗಿ ಭಾವಿಸುತ್ತೇನೆ ಎಂದು ವಿಶ್ವ ಆರೋಗ್ಯಸಂಸ್ಥೆಯ ತುರ್ತುಕಾರ್ಯ ವಿಭಾಗದ ನಿರ್ದೇಶಕ ಮೈಕೆಲ್ ರಯಾನ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

Similar News