ನೆತನ್ಯಾಹುರನ್ನು ನಿರ್ಬಂಧಿಸಲು ಇಸ್ರೇಲ್ ಮಾಜಿ ಪ್ರಧಾನಿ ಆಗ್ರಹ

Update: 2023-03-17 17:03 GMT

ಟೆಲ್ಅವೀವ್, ಮಾ.17: ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಯೋಜನೆ ರೂಪಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ನಿಬರ್ಂಧಿಸುವಂತೆ ಇಸ್ರೇಲ್ನ ಮಾಜಿ ಪ್ರಧಾನಿ ಜಾಗತಿಕ ಮುಖಂಡರನ್ನು ಆಗ್ರಹಿಸಿದ್ದಾರೆ.

ನ್ಯಾಯಾಂಗ ವ್ಯವಸ್ಥೆ ಸುಧಾರಣೆಯ ಮಸೂದೆಯ ಅನುಷ್ಟಾನದಲ್ಲಿ ಅವಸರದ ಕ್ರಮ ಬೇಡ ಎಂದು ಅಮೆರಿಕ ಮತ್ತು ಜರ್ಮನಿ ಈಗಾಗಲೇ ನೆತನ್ಯಾಹುಗೆ ಸಲಹೆ ನೀಡಿದೆ.

ನೆತನ್ಯಾಹು ಜತೆ ಜಾಗತಿಕ ಮುಖಂಡರು ಯಾವುದೇ ಸಭೆ ನಡೆಸಬಾರದು. ಅವರೊಂದಿಗೆ ವೇದಿಕೆ ಹಂಚಿಕೊಳ್ಳಬಾರದು, ಅವರನ್ನು ಭೇಟಿಯಾಗಲೂ ನಿರಾಕರಿಸಬೇಕು ಎಂದು 2006ರಿಂದ 2009ರವರೆಗೆ ಇಸ್ರೇಲ್ನ ಪ್ರಧಾನಿಯಾಗಿದ್ದ ಎಹೂದ್ ಓಲ್ಮರ್ಟ್ ಆಗ್ರಹಿಸಿದ್ದಾರೆ. ಮುಂದಿನ ವಾರ ಬ್ರಿಟನ್ ಪ್ರಧಾನಿ ರಿಷಿ ಸುನಕ್ ನೆತನ್ಯಾಹುರನ್ನು ಭೇಟಿಯಾಗುವ ಹಿನ್ನೆಲೆಯಲ್ಲಿ ಓಲ್ಮರ್ಟ್ ಈ ಆಗ್ರಹ ಮುಂದಿರಿಸಿದ್ದಾರೆ.

ಓರ್ವ ಮಾಜಿ ಪ್ರಧಾನಿಯಾಗಿ ತಾನು ಈ ರೀತಿ ಆಗ್ರಹಿಸುವುದು ಅಸಾಮಾನ್ಯ ವಿಷಯ ಎಂದು ನನಗೆ ತಿಳಿದಿದೆ. ಆದರೆ ಪರಿಸ್ಥಿತಿ ಹಾಗಿದೆ. ಈಗಿನ ಇಸ್ರೇಲಿ ಸರಕಾರ ಇಸ್ರೇಲ್-ವಿರೋಧಿಯಾಗಿದೆ ಎಂದು ತನ್ನ ಭಾವನೆಯಾಗಿದೆ ಎಂದು ಎಹೂದ್ ಓಲ್ಮರ್ಟ್ ಹೇಳಿದ್ದಾರೆ. ಈ ಮಧ್ಯೆ, ನೆತನ್ಯಾಹು ಸರಕಾರದ ಯೋಜನೆಯನ್ನು ವಿರೋಧಿಸಿ ಸಾವಿರಾರು ಇಸ್ರೇಲಿಯನ್ನರು ಬೀದಿಗಿಳಿದು ಪ್ರತಿಭಟನೆ ಮುಂದುವರಿಸಿದ್ದಾರೆ. 

Similar News