ಉತ್ತರ ಕೊರಿಯದ ಕ್ಷಿಪಣಿ 33 ನಿಮಿಷದಲ್ಲಿ ಅಮೆರಿಕ ತಲುಪಬಹುದು: ಅಧ್ಯಯನ ವರದಿ

Update: 2023-03-17 17:06 GMT

ಬೀಜಿಂಗ್, ಮಾ.17: ಉತ್ತರ ಕೊರಿಯಾ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಪರಮಾಣುಶಕ್ತ ಕ್ಷಿಪಣಿ ಉಡಾವಣೆಗೊಂಡ ಕೇವಲ 33 ನಿಮಿಷದಲ್ಲೇ ಅಮೆರಿಕವನ್ನು ತಲುಪಬಹುದು ಎಂದು ಚೀನಾದ ರಕ್ಷಣಾ ತಜ್ಞರ ಅಧ್ಯಯನ ವರದಿ ಉಲ್ಲೇಖಿಸಿದೆ.

ಉತ್ತರಕೊರಿಯಾದ ಪರಮಾಣು ಕ್ಷಿಪಣಿಯ ಬಗ್ಗೆ ಚೀನಾದ `ತಿಯಾನ್ರನ್ ಕ್ಸು' ನೆಟ್ವರ್ಕ್ ನ ತಂಡ ನಡೆಸಿದ ಅಧ್ಯಯನದಲ್ಲಿ ಈ ಅಂಶ ದೃಢಪಟ್ಟಿದೆ. ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಉತ್ತರ ಕೊರಿಯಾದ ಕ್ಷಿಪಣಿಯನ್ನು ಬೇಧಿಸಲು ವಿಫಲವಾದರೆ ಈ ಕ್ಷಿಪಣಿಗಳು 33 ನಿಮಿಷದೊಳಗೆ ಅಮೆರಿಕದ ಪಶ್ಚಿಮ ತೀರ ಅಥವಾ ಪೂರ್ವತೀರದ ಗುರಿಯನ್ನು ತಲುಪಲಿದೆ. ಉತ್ತರ ಕೊರಿಯಾದ ಪರಮಾಣು ಸಿಡಿತಲೆಯ ಹ್ವಸೋಂಗ್-15 ಕ್ಷಿಪಣಿಯು 13,000 ಕಿ.ಮೀ ದೂರದ ಗುರಿಯನ್ನು ತಲುಪುವ ಸಾಮಥ್ರ್ಯವನ್ನು ಹೊಂದಿದೆ.

Similar News