ಆಸ್ಟ್ರೇಲಿಯ: ಉಷ್ಣಮಾರುತಕ್ಕೆ ಲಕ್ಷಾಂತರ ನದಿ ಮೀನುಗಳ ಬಲಿ

Update: 2023-03-18 17:29 GMT

ಸಿಡ್ನಿ,ಮಾ.18: ಆಸ್ಟ್ರೇಲಿಯದ ದುರ್ಗಮ ಔಟ್ ಬ್ಯಾಕ್ ಪ್ರಾಂತದಲ್ಲಿ ಭೀಕರ ಉಷ್ಣಮಾರುತವು ಬೀಸುತ್ತಿದ್ದು, ನದಿಯೊಂದರಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಸತ್ತ ಮೀನುಗಳ ಕಳೇಬರಗಳು ಕೊಳೆತು ನೀರಿನಲ್ಲಿ ತೇಲುತ್ತಿರುವ ದೃಶ್ಯಾವಳಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನದಿಯಲ್ಲಿ ನೀರೇ ಕಾಣದಷ್ಟು ದಟ್ಟವಾಗಿ ತೇಲುತ್ತಿರುವ ಲಕ್ಷಾಂತರ ಮೀನುಗಳ ಕಳೇಬರಗಳ ನಡುವೆಯೇ ದೋಣಿಗಳು ಸಂಚರಿಸುತ್ತಿರುವ ದೃಶ್ಯಗಳು ಕೂಡಾ ಪ್ರಸಾರವಾಗಿವೆ.

ಮೆನ್ಡೀ ಪಟ್ಟಣದ ಸಮೀಪದಲ್ಲಿರುವ ಡಾರ್ಲಿಂಗ್ ನದಿಯಲ್ಲಿ ತಾಪಮಾನದ ಪ್ರಕೋಪಕ್ಕೆ ಕೋಟ್ಯಂತರ ಮೀನುಗಳು ಸಾವನ್ನಪ್ಪಿರುವುದಾಗಿ ದಿ ನ್ಯೂ ಸೌತ್ ವೇಲ್ಸ್ ಸರಕಾರವು ಶುಕ್ರವಾರ ತಿಳಿಸಿದೆ. 2018ರ ಬಳಿಕ ಈ ಪ್ರದೇಶದಲ್ಲಿ ನದಿಯಲ್ಲಿ ಮೀನುಗಳು ಸಾಮೂಹಿಕವಾಗಿ ಸಾವನ್ನಪ್ಪಿರುವುದು ಇದು ಮೂರನೆ ಸಲವಾಗಿದೆ.

Similar News