ಪುಟಿನ್‌ಗೆ ಪರ್ಯಾಯ ನಾಯಕನನ್ನು ರಶ್ಯ ಹುಡುಕಿದೆ: ಉಕ್ರೇನ್

Update: 2023-03-19 18:32 GMT

ಕೀವ್, ಮಾ.19: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಬದಲಿಯನ್ನು ಸಿದ್ಧಪಡಿಸಿಕೊಂಡಿದೆ ಎಂದು ಉಕ್ರೇನ್‌ನ ಗುಪ್ತಚರ  ಅಧಿಕಾರಿಯೊಬ್ಬರು ಪ್ರತಿಪಾದಿಸಿದ್ದಾರೆ.

ಕಳೆದ ವರ್ಷದ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಶ್ಯ ಆಕ್ರಮಣ ಆರಂಭಿಸಿದಾಗ ತ್ವರಿತವಾಗಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿತ್ತು. ಆದರೆ ಪಾಶ್ಚಿಮಾತ್ಯರ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವಿನ ಪ್ರಯೋಜನ ಪಡೆದ ಉಕ್ರೇನ್ ಬಲವಾಗಿ ಪ್ರತಿರೋಧ ಒಡ್ಡಿದ್ದು ಒಂದು ವರ್ಷ ಕಳೆದರೂ ಯುದ್ಧ ಅಂತ್ಯಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಈ ಹಿನ್ನಡೆಗಾಗಿ ಪುಟಿನ್ ವಿರುದ್ಧ ರಶ್ಯದಲ್ಲಿ ಅಸಮಾಧಾನ ಹೆಚ್ಚುತ್ತಿದೆ. ರಶ್ಯದ ಜನತೆ ಪುಟಿನ್ ಅವರ ಮೇಲಿಟ್ಟಿದ್ದ ಭರವಸೆ ಮಂಕಾಗುತ್ತಿರುವುದರಿಂದ ಅವರ ಪದಚ್ಯುತಿಗೆ ಒತ್ತಡ ಹೆಚ್ಚುತ್ತಿದೆ ಎಂದು  ಉಕ್ರೇನ್‌ನ ಗುಪ್ತಚರ ಅಧಿಕಾರಿಯನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಇದರ ಜತೆಗೆ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಪುಟಿನ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿರುವುದರಿಂದ ಪರ್ಯಾಯ ನಾಯಕನ ಆಯ್ಕೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಉಕ್ರೇನ್ ಗುಪ್ತಚರ ಇಲಾಖೆಯ ವಕ್ತಾರ ಆಂಡ್ರಿಯ್ ಯುಸೋವ್ ಹೇಳಿದ್ದಾರೆ.

Similar News