ಉಯಿಗರ್ ಮುಸ್ಲಿಮರಿಗೆ ಬೆಂಬಲ ಮುಂದುವರಿಯಲಿದೆ: ಅಮೆರಿಕದ ಅಧ್ಯಕ್ಷ ಬೈಡನ್

Update: 2023-03-23 17:19 GMT

ವಾಷಿಂಗ್ಟನ್, ಮಾ.23: ಚೀನಾದಲ್ಲಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಉಯಿಗರ್ ಮುಸ್ಲಿಮರೊಂದಿಗೆ ಅಮೆರಿಕದ ಒಗ್ಗಟ್ಟು ಮುಂದುವರಿಯಲಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಪುನರುಚ್ಚರಿಸಿದ್ದಾರೆ.

‌ವಿಶ್ವದಾದ್ಯಂತ ಮುಸ್ಲಿಮರ ರಮದಾನ್ ಪವಿತ್ರ ತಿಂಗಳ ಆಚರಣೆ ಆರಂಭವಾಗಿರುವ ಸಂದರ್ಭದಲ್ಲಿ ಬೈಡನ್ ಈ ಸಂದೇಶ ರವಾನಿಸಿದ್ದಾರೆ. ಚೀನಾದಲ್ಲಿ ಉಯಿಗರ್ಗಳು, ಬರ್ಮಾದಲ್ಲಿ ರೊಹಿಂಗ್ಯಾಗಳು ಹಾಗೂ ವಿಶ್ವದ ಹಲವೆಡೆ ಇತರ ಮುಸ್ಲಿಮ್ ಸಮುದಾಯದವರು ಸೇರಿದಂತೆ ದಬ್ಬಾಳಿಕೆ ಎದುರಿಸುತ್ತಿರುವವರ ಜತೆ ಅಮೆರಿಕವು ತನ್ನ ಪಾಲುದಾರರೊಂದಿಗೆ ಒಗ್ಗಟ್ಟಾಗಿ ನಿಲ್ಲುವುದನ್ನು ಮುಂದುವರಿಸಲಿದೆ.

ಕಷ್ಟದಿಂದ ಬಳಲುತ್ತಿರುವ ಮುಸ್ಲಿಮ್ ಸಮುದಾಯದವರಿಗೆ ಈ ಪವಿತ್ರ ಸಂದರ್ಭದಲ್ಲಿ ನಮ್ಮ ಬೆಂಬಲ, ಒಗ್ಗಟ್ಟನ್ನು ಪುನರುಚ್ಚರಿಸಲಿದ್ದೇವೆ ಎಂದು ಬೈಡನ್ ಹೇಳಿದ್ದಾರೆ. 

Similar News